ಜಿಲ್ಲೆ

ಸರ್ಕಾರಕ್ಕೆ ಕಾಳಜಿ ಇಲ್ಲ

ಕಳೆದ ಎರಡು ದಶಕಗಳಿಂದ ದಿನಪತ್ರಿಕೆಗಳ ವಿತರಕನಾಗಿ ಕಾರ್ಯ ನಿರ್ವಹಿಸುತ್ತಿರುವೆ. ಸದ್ಯ ಸಮಾಜದಲ್ಲಿ ಒಂದು ಸ್ಥಾನದಲ್ಲಿರುವೆ ಎಂಬುದಕ್ಕೆ ಈ ವೃತ್ತಿಯ ಕಾರಣವಾಗಿದೆ. ಇದರ ಜತೆಗೆ ಗ್ಯಾಸ್ ಸೆಂಟರ್ ನಡೆಸುತ್ತಿದ್ದು ಗ್ರಾಹಕರಿಗೆ ಗ್ಯಾಸ್ ಖಾಲಿಯಾಗಿದೆ ಎಂಬ ಮಾಹಿತಿ ಬಹು ಬೇಗ ತಿಳಿಯಲಿದೆ. ಇದರಿಂದ ಮರು ಗ್ಯಾಸ್ ವಿತರಣೆ ಅನುಕೂಲವಾಗಿದೆ. ಆದರೆ, ದಿನಂ ಪ್ರತಿ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ಅಂತಹ ಸಮಸ್ಯೆಗಳನ್ನು ಹೊತ್ತ ತರುವ ವಿತಕರಿಗೆ ಮಾತ್ರ ಕನಿಷ್ಠ ಸೌಲಭ್ಯಗಳು ಮಾತ್ರ ದೊರೆಯದೆ ಇರುವುದು ಬೇಸರವಾಗಿದೆ. ವರ್ಷದಲ್ಲಿ ನಾಲ್ಕು ದಿನ ಮಾತ್ರ ರಜೆ ಪಡೆದು ಉಳಿದೆಲ್ಲ ದಿನ ಕಾರ್ಯ ನಿರ್ವಹಿಸುವ ವಿತರಕರ ಮೇಲೆ ಸರ್ಕಾರಕ್ಕೆ ಏಕೆ ಕಾಳಜಿ ಇಲ್ಲ ಎಂದು ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಪತ್ರಿಕಾ ವಿತರಕ ವಿ.ಗೋವಿಂದ ಅಸಮಾಧಾನ ಹೊರಹಾಕಿದರು.

ವಿವಿಯಿಂದ ಮೂವರಿಗೆ ಗೌಡಾ ಘೋಷಣೆ

* ವಿಎಸ್‌ಕೆಯ 13ನೇ ಘಟಿಕೋತ್ಸವ

* ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬಳ್ಳಾರಿ

ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಹಿನ್ನೆಲೆ ಸಾಹಿತಿ ಡಾ.ವಸುಂಧರಾ ಭೂಪತಿ, ಬಿಕೆಜಿ ಫೌಂಡೇಶನ್ ಬಾವಿಹಳ್ಳಿ ನಾಗನಗೌಡ, ಪ್ರೆಸ್ಟೀಜ್ ಗ್ರೂಪ್‌ನ ಗೌರವಾಧ್ಯಕ್ಷ ಇರ್ಫಾನ್ ರಜಾಕ್ ಅವರಿಗೆ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದರು.

ಗೌಡಾಗೆ ಧರಂಸಿಂಗ್, ಅಸ್‌ಮ್ ನಹೀಂ, ವಿನೋದ್ ದೊಡ್ಡಣ್ಣನವರ್, ದರೋಜಿ ಈರಮ್ಮ, ಸರಸ್ವತಿ, ಜೆ.ಎಂ.ವೀರಸಂಗಯ್ಯ ಹಾಗೂ ಮೇಲಿನ ಮೂವರು ಸೇರಿ ಒಟ್ಟು ಒಂಬತ್ತು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈ ಮೂವರ ಹೆಸರನ್ನು ಅಂತಿಮಗೊಳಿಸಿ ಆಯ್ಕೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಾರಂಭವು ವಿವಿ ಆವರಣದಲ್ಲಿ ಸೆ.04 ರಂದು ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್ ನಿರ್ದೇಶಕ ಪ್ರೊ.ಅವಿನಾಶ್ ಚಂದ್ರ ಪಾಂಡೆ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.

ಉದ್ಯಮಿ ಇರ್ಫಾನ್ ರಜಾಕ್ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ನಾಲ್ಕು ದಶಕಗಳ ಕಾಲ ವಾಣಿಜ್ಯ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶ್ವಸಿಯಾಗಿ ಹೂಡಿಕೆ ನಡೆಸಿ ನಾಡಿನ ಖ್ಯಾತ ಉದ್ಯಮಿಗಳಾಗಿ ಮುನ್ನಡೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಎಂದರು.

ಸಾಹಿತಿ ಡಾ.ವಸಂಧರಾ ಭೂಪತಿ ಸಂಡೂರಿನವರಾಗಿದ್ದು ತಮ್ಮ ವಿಶಿಷ್ಟ ವೈದ್ಯಕೀಯ ಸೇವೆ, ಸಾಹಿತ್ಯ, ಸಮಾಜ ಸೇವೆ ಮತ್ತು ಪತ್ರಿಕಾ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಆರೋಗ್ಯ, ಶಿಬಿರ, ವೈದ್ಯಕೀಯ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸಾಧನೆಗೈದಿದ್ದಾರೆ. 65ಕ್ಕೂ ಹೆಚ್ಚು ಆರೋಗ್ಯ ಕೃತಿಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಅನುವಾದಗೊಂಡಿವೆ. ಇವರ ಸೇವೆಗೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಮುಡಿಗೇರಿವೆ ಎಂದರು.

ಬಾವಿಹಳ್ಳಿ ನಾಗನಗೌಡ ಗಣಿನಾಡಿನ ಪ್ರಸಿದ್ದಿ ಉದ್ಯಮಿಯಾಗಿದ್ದು ಬಿಕೆಜಿ ಫೌಂಡೇಶನ್ ಮೂಲಕ ಶಿಕ್ಷಣ ಅಭಿವೃದ್ಧಿ, ಸಾಮಾಜಿಕ ಸೇವೆ ಮತ್ತು ಸಾಹಿತ್ಯ- ಸಾಂಸ್ಕ್ರತಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರಗಳ ಮೂಲಕ ಕ್ಷಯರೋಗಿಗಳ ಚಿಕಿತ್ಸೆಗೆ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳದಿಂದ ಸಮುದಾಯಕ್ಕೆ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಕೊಡುಗೆ ನೀಡಿದ್ದಾರೆ ಎಂದು ಪರಿಚಯಿಸಿದರು.

ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರದ ವಿವಿಧ ವಿಭಾಗಗಳಲ್ಲಿ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಾನಾ ವಿಭಾಗಗಳಿಂದ ಒಟ್ಟು 57 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ಒಟ್ಟು 155 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ. ವಿವಿಯ ವಾಣಿಜ್ಯ ಶಾಸ್ತ್ರದ ಪದವಿ ವಿದ್ಯಾರ್ಥಿ ಎನ್.ಹಂಸ ನಾಲ್ಕು, ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ರಾಜೇಶ್ವರಿ ಮೂರು ಹಾಗೂ ಭೌತಶಾಸ್ತ್ರದ ಮನೋಜ್, ರಸಾಯನ ಶಾಸ್ತ್ರದ ಸುಹಾನಾ ತಸ್ಲೀಮ್, ಸಮಾಜ ಕಾರ್ಯ ವಿಭಾಗದ ಶಿಲ್ಪಾ, ಬಿ.ಕಾಂ. ಪದವಿಯ ವಿಷ್ಣು ಪ್ರಿಯಾ, ಬಿಎಸ್‌ಸಿಯ ಮಹಮ್ಮದ್ ನಕೀಬಲಿ ಸೇರಿ ಐವರು ತಲಾ ಎರಡು ಚಿನ್ನದ ಪದಕ ಪಡೆಯಲಿದ್ದಾರೆ ಎಂದರು.

ವಿವಿಯಲ್ಲಿ ಒಟ್ಟು 19179 ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ 1845 ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ ಎಂದರು. ವಿವಿ ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ, ಸಿ.ನಾಗರಾಜ ಇದ್ದರು.

ವಿಶೇಷ ಸೌಲಭ್ಯ ಕಲ್ಪಿಸಲಿ

* ಎರಡೂವರೆ ದಶಕದಲ್ಲಿ ಪತ್ರಿಕಾ ವಿತರಕ ವೃತ್ತಿಯಲ್ಲಿ ಹಲವು ಏಳು ಬೀಳಿನಿಂದ ಕಂಡಿರುವೆ. ಚಳಿ, ಮಳೆ ಹಾಗೂ ಬೇಸಿಗೆ ಕಾಲ ಎನ್ನದೆ ಸೂಕ್ತ ಸಮಯದಲ್ಲಿಯೇ ಪತ್ರಿಕೆಗಳನ್ನು ತಲುಪಿಸಲಾಗಿದೆ. ಪತ್ರಿಕಾ ವಿತರಕ ವೃತ್ತಿಯಿಂದ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿವೆ. ಆದರೆ, ಸೂಕ್ತವಾಗಿ ನಿರ್ವಹಿಸುವ ಪತ್ರಿಕಾ ವಿತರಕರ ಮೇಲೆ ಸರ್ಕಾರ ಸೌಲಭ್ಯ ಒದಗಿಸುವುದಲ್ಲಿ ಮೀನಾಮೇಷ ಏಕೆ ತೋರುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಅಲ್ಲದೆ, ಪ್ರತಿ ಸರ್ಕಾರಗಳು ಕೇವಲ ಆಶ್ವಾಸನೆಗಳ ಮಾತುಗಳನ್ನು ಆಡುವುದು ಬಿಟ್ಟರೆ ಈಡೇರಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಬೆಲೆ ಏರಿಕೆಯಾಗಿವೆ. ಇದನ್ನು ಮನದಟ್ಟಿಲ್ಲಿಕೊಂಡು ಪತ್ರಿಕಾ ವಿತರಕರಿಗಾಗಿ ವಿಶೇಷ ಸೌಲಭ್ಯ ಒದಗಿಸಲಿ ಎಂಬುದು ಕಂಪ್ಲಿಯ ಪತ್ರಿಕಾ ವಿತರಕ ಭರತ್ ಕುಮಾರ್ ಅವರ ಮನದಾಳದ ಮಾತುಗಳು ಆಗಿವೆ.

ಕುಟುಂಬದ ಬಗ್ಗೆ ಅರಿಯಲಿ

* ಮಹಿಳೆಯು ಎಲ್ಲ ಕ್ಷೇತ್ರದಲ್ಲಿಯೂ ನಾ ಮುಂದು ಎಂಬ ಆಶಯದಿಂದ ಕಳೆದ ಹತ್ತು ವರ್ಷಗಳಿಂದ ಪತ್ರಿಕಾ ವಿತರಕಳಾಗಿರುವೆ. ಅಲ್ಲದೆ, ಪ್ರತಿಯೊಬ್ಬ ಓದುಗರಿಗೆ ನಿತ್ಯ ಸಮಾಜದಲ್ಲಿ ನಡೆಯುವ ಸುದ್ದಿಗಳು ಮುಟ್ಟಿಸುವಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನದಿಂದ ಕುಟುಂಬ ಹಾಗೂ ಮಕ್ಕಳ ಶೈಕ್ಷಣಿಕಕ್ಕೆ ಅನುಕೂಲವಾಗಿದೆ. ಆದರೆ, ಪ್ರಪಂಚದ ಯಾವುದೇ ಸ್ಥಳದಲ್ಲಿ ಏನೇ ಘಟನೆ ನಡೆದರೂ ವಿಷಯ ತಿಳಿದುಕೊಳ್ಳುವ ಸರ್ಕಾರದ ಜನಪ್ರತಿನಿಧಿಗಳು ಏಕೆ ಪತ್ರಿಕಾ ವಿತರಕರ ಜೀವನ ಬಗ್ಗೆ ಗಮನಹರಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣ ಒಂದು ಸಹಾಯದ ಸುದ್ದಿಯನ್ನು ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಇಲ್ಲ ಎಂಬುದು ಹುಡುಕುವ ರಾಜಕಾರಣಿಗಳು ನಮ್ಮ ಜೀವನ ಬಗ್ಗೆ ಧ್ವನಿಯಾಗಲಿ ಎಂಬುದೇ ಆಶಯವಾಗಿದೆ. ಪ್ರತಿ ಒಂದು ಸಮುದಾಯವನ್ನು ಗುರುತಿಸಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸುವ ಸರ್ಕಾರ ನಮ್ಮ ಮಕ್ಕಳಿಗೆ ವೇದಿಕೆ ಕಲ್ಪಿಸಲಿ ಎಂದು ಬಳ್ಳಾರಿ ತಾಲೂಕಿನ ಪತ್ರಿಕಾ ವಿತರಕಿ ವಿ.ಸುಧಾ ತಿಳಿಸಿದರು.

ಆರೋಗ್ಯ ವಿಮೆ ಒದಗಿಸಲಿ

* ಕಳೆದ ಹದಿನೈದು ವರ್ಷಗಳಿಂದ ಪತ್ರಿಕಾ ವಿತರಕನಾಗಿದ್ದು ವೃತ್ತಿಯೂ ಜೀವನಕ್ಕೆ ತೃಪ್ತಿ ತಂದಿದೆ. ಮಳೆಗಾಲದಲ್ಲಿ ಪತ್ರಿಕೆ ವಿತರಿಸುವ ವೇಳೆ ಪತ್ರಿಕೆ ಹಾಳಾದರೆ ಅದರ ಸಂಪೂರ್ಣ ಹೊಣೆ ವಿತರಕನಾಗಿರುತ್ತದೆ. ಓದುಗರಿಗೆ ಪತ್ರಿಕೆ ತಲುಪಿಸಿಲ್ಲ ಎಂಬ ಅಸಂತೃಪ್ತಿ ಒಂದಡೆಯಾದರೆ ನಷ್ಟದ ಜವಾಬ್ದಾರಿ ನಾವೇ ವಹಿಸಕೊಳ್ಳಬೇಕಾಗುತ್ತದೆ. ಅಲ್ಲದೆ, ಕೊರೆಯುವ ಚಳಿಯಲ್ಲಿ ಬೆಳ್ಳಂ ಬೆಳಗ್ಗೆ ಪತ್ರಿಕೆ ವಿತರಿಸಲು ಹೊರಟರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇಂತಹ ವೇಳೆಯಲ್ಲಿ ವಿತರಕರಿಗಾಗಿ ಸರ್ಕಾರ ಆರೋಗ್ಯ ವಿಮೆ ಸೌಲಭ್ಯ ಒದಗಿಸಿದರೆ ಹಣ ಉಳಿದುಕೊಳ್ಳಲಿದೆ. ಮಳೆಯಿಂದ ಪತ್ರಿಕೆ ಹಾಳಾದರೆ ಮಳೆಗಾಲದಲ್ಲಿ ಪತ್ರಿಕಾ ವಿತರಕರಿಗೆ ತಿಂಗಳು ಇಂತಿಷ್ಟು ಹಣ ಬಿಡುಗಡೆಗೊಳಿಸುವ ಯೋಜನೆ ಜಾರಿಗೊಳಿಸಲಿ ಎಂಬುದು ಬಳ್ಳಾರಿ ನಗರದ ಪತ್ರಿಕಾ ವಿತರಕ ರಂಗನಾಥ ಅಭಿಪ್ರಾಯವಾಗಿತ್ತು.

ಸರ್ಕಾರ ಕಡೆಗಣನೆ

* ತಾಲೂಕಿನಲ್ಲಿ ಕಳೆದ 12 ವರ್ಷಗಳಿಂದ ಪತ್ರಿಕಾ ವಿತರಕ ವೃತ್ತಿ ಜತೆಗೆ ಕೆಲವೊಂದು ಸಣ್ಣಪುಟ್ಟ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವೆ. ಕೆಲ ಬಾರಿ ಮನೆಯಲ್ಲಿ ಹಣದ ಅವಶ್ಯಕತೆ ಹಾಗೂ ಆಸ್ಪತ್ರೆ ಖರ್ಚಿಗಾಗಿ ಈ ವೃತ್ತಿಯಿಂದ ಕೈ ಸಾಲ ಮಾಡುವ ಹೊರೆ ತಪ್ಪಿದೆ. ಸರ್ಕಾರದ ಪ್ರತಿ ಕ್ಷೇತ್ರದಲ್ಲಿ ಪ್ರತಿ ವರ್ಷ ವಿವಿಧ ಹೆಸರಿನಲ್ಲಿ ಸಾಧನೆಗೈದವರನ್ನು ಗುರುತಿಸಿ ದೊಡ್ಡ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿ ನಗದು ಬಹುಮಾನ ನೀಡುತ್ತಾರೆ. ಆದರೆ, ಹಲವು ವರ್ಷಗಳಿಂದ ಸಾಹಿತ್ಯ, ಸಾಂಸ್ಕ್ರತಿಕ, ಕ್ರೀಡೆ ಅಂತಹ ಎಲ್ಲ ಕಲೆಗಳ ಪ್ರದರ್ಶನವನ್ನು ಪ್ರತಿಯೊಬ್ಬರಿಗೆ ಮುಟ್ಟಿಸುವರನ್ನು ಸರ್ಕಾರ ಏಕೆ ಕಡೆಗಣಿಸುತ್ತಿದೆ. ಸರ್ಕಾರದಿಂದನೇ ಪತ್ರಿಕಾ ವಿತರಕರ ಗಣತಿ ನಡೆಸಿ ವರ್ಷ ಈ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವೇದಿಕೆ ಕಲ್ಪಿಸಲಿ. ನಾನಾ ಯೋಜನೆಗಳ ರೂಪದಲ್ಲಿ ಹಲವರಿಗೆ ಒದಗಿಸಿದಂತೆ ಪತ್ರಿಕಾ ವಿತರಕರಿಗೆ ಅನುದಾನ ಕೂಡ ನೀಡಲಿ. ನಿವೇಶನ ಹಾಗೂ ವಸತಿ ರಹಿತವರಿಗೆ ಸೌಲಭ್ಯ ಕಲ್ಪಿಸಲಿ ಎಂಬುದಾಗಿ ಪ್ರತಿ ವರ್ಷ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೆ ಪ್ರಯೋಜನೆಗೊಂಡಿಲ್ಲ ಎಂದು ಕುರುಗೋಡು ತಾಲೂಕಿನ ಪತ್ರಿಕಾ ವಿತರಕ ಪೊಂಪನಗೌಡ ಬೇಸರ ವ್ಯಕ್ತಪಡಿಸಿದರು.

====