ಬಳ್ಳಾರಿ : ಮೃತ ಬಾಣಂತಿಯರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಮೃತ ಬಾಣಂತಿ ಕುಟುಂಬಕ್ಕೆ ಮಾತ್ರ ಪರಿಹಾರದ ಚೆಕ್ ವಿತರಿಸಿದ್ದಾರೆ. ಆದರೆ, ತಾಲೂಕಿನ ಬಸರಕೋಡ ಗ್ರಾಮದ ಮೃತ ಬಾಣಂತಿಯರಾದ ಲಲಿತಾ ಹಾಗೂ ಬಾಣಾಪುರದ ನಂದಿನಿ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸದೆ ಸಾಂತ್ವನ ಮಾತ್ರ ಹೇಳಿದ್ದಾರೆ.
ಜಿಲ್ಲೆಗೆ ಶನಿವಾರ ಭೇಟಿ ನೀಡಿದ್ದ ದಿನೇಶ್ ಗುಂಡೂರಾವ್ ಮೊದಲು ಕೂಡ್ಲಿಗಿಯ ಸುಮಯ್ ಕುಟುಂಬಕ್ಕೆ ಭೇಟಿ ನೀಡಿದ್ದರು. ಬಳಿಕ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳ ಜತೆ ಚರ್ಚಿಸಿ ಹಾಗೂ ಹೆರಿಗೆ ವಾರ್ಡ ಗಳು ಪರಿಶೀಲಿಸಿದ್ದರು. ನಂತರ ತಾಲೂಕಿನ ಬಸರಕೋಡು ಹಾಗೂ ಬಾಣಪುರದ ಮೃತ ಬಾಣಂತಿಯರ ಕುಟುಂಬದ ಮನೆಗೆ ಭೇಟಿ ನೀಡಿದ್ದ ಸಚಿವರು ಯಾವುದೇ ಚೆಕ್ ವಿತರಿಸದೆ ಸಾಂತ್ವನ ಮಾತ್ರ ಹೇಳಿದ್ದಾರೆ ಎನ್ನಲಾಗಿದೆ. ಮನೆಗೆ ಭೇಟಿ ನೀಡಿದ ಸಚಿವರು ಯಾವುದೇ ಚೆಕ್ ವಿತರಿಸಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಹಾರ ಒದಗಿಸಿ ಚೆಕ್ ನೀಡಲಾಗುವುದು ಎಂಬುದಾಗಿ ಭರವಸೆ ನೀಡಿದ್ದಾರೆ. ಚೆಕ್ ಕೈ ಸೇರಲು ಇನ್ನೇಷ್ಟು ದಿನ ಕಾಯಬೇಕು ಎಂದು ಮೃತ ಬಾಣಂತಿಯ ಪತಿ ಮಂಜುನಾಥ ವಿಜಯವಾಣಿಗೆ ತಿಳಿಸಿದರು.