ಜಿಲ್ಲೆ

ವಿಚಾರಗೋಷ್ಠಿ ಸದುಪಯೋಗ ಪಡೆದುಕೊಳ್ಳಿ

ಬಳ್ಳಾರಿ : ಶಾಲಾ ಮಕ್ಕಳಲ್ಲಿ ಗಣಿತಾ ವಿಷಯದಲ್ಲಿ ಕಲಿಕಾಸಕ್ತಿ ಮೂಡಿಸಲು ವಿಚಾರ ಸಂಕಿರಣಗಳು ಮುಖ್ಯವಾಗಿದ್ದು, ಶಿಕ್ಷಕರು ಸಕ್ರೀಯವಾಗಿ ಪಾಲ್ಗೊಂಡು ವಿಚಾರಗೋಷ್ಠಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಷನ್ ಸಹಯೋಗದೊಂದಿಗೆ ಗುರುವಾರ ನಡೆದ ಗಣಿತ ಕಲಿಕಾ ಆಂದೋಲನ-ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಕ್ಷರ ಫೌಂಡೇಷನ್‌ನ ಕಾರ್ಯಾಚರಣೆ ಮತ್ತು ಸಮುದಾಯ ಅಭಿವೃದ್ಧಿಯ ಮುಖ್ಯಸ್ಥ ಜೆ.ವಿ. ಶಂಕರ್ ನಾರಾಯಣ ಮಾತನಾಡಿ, ಶಾಲಾ ಮಟ್ಟದಲ್ಲಿ ಗಣಿತ ವಿಷಯದಲ್ಲಿ ಮಕ್ಕಳಿಗೆ ಗುಣಮಟ್ಟ ತರಬೇತಿ ನೀಡಲು, ಪ್ರೌಢಶಾಲಾ ಮಕ್ಕಳಲ್ಲಿನ ಕಲಿಕೆಯ ಸಾರಾಂಶವನ್ನು ಕಾರ್ಯಗತಗೊಳಿಸಲು ವಿಚಾರ ಸಂಕಿರಣವು ಹಮ್ಮಿಕೊಳ್ಳಲಾಗಿದೆ ಎಂದರು.

ಬಳಿಕ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳ ಜಿಲ್ಲೆಯ ವರದಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಉತ್ತಮ ಫಲಿತಾಂಶ ಪಡೆದ ಜಿಲ್ಲೆಯಲ್ಲಿನ 25 ಶಾಲೆಗಳು ಮತ್ತು 25 ಗ್ರಾಮ ಪಂಚಾಯತಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.