ಜಿಲ್ಲೆ

ಸುಕೋ ಬ್ಯಾಂಕ್ ಶೇ.19.18% ರಷ್ಟು ಪಗ್ರತಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಸಹಕಾರಿ ಕ್ಷೇತ್ರದ ವಿಶ್ವಾಸಾರ್ಹ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ 2024-25ನೇ ಆರ್ಥಿಕ ಸಾಲಿನಲ್ಲಿ ಶೇ. 19.18%ರಷ್ಟು ಪಗ್ರತಿ ಸಾಧಿಸಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿದರು.

ನಗರದ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ 2,120 ಕೋಟಿ ರೂ. ವಹಿವಾಟು ನಡೆಸಿ, 9.29 ಕೋಟಿ ರೂ. ಲಾಭ ಪಡೆದಿದ್ದು, ತೆರಿಗೆಯ ಪಾವತಿಯ ನಂತರ ಆರು ಕೋಟಿ ರೂ. ನಿವ್ವಳ ಲಾಭವಾಗಿದೆ. ಷೇರುದಾರರಿಗೆ ಶೇ. 9% ಲಾಭಾಂಶ ನೀಡಲು ಸಾಮಾನ್ಯ ಸಭೆಗೆ ಶಿಫಾರಸ್ಸು ಮಾಡಲಾಗಿದೆ. ಬ್ಯಾಂಕ್‌ನ ಆರಂಭದಿಂದಲೂ ಲಾಭಗಳಿಕೆ ಮತ್ತು ಪಗ್ರತಿ ಸಾಧಿಸುವಲ್ಲಿ ಸದಾ ಮುನ್ನಡೆಯಲ್ಲಿದೆ ಎಂದರು.

ಪ್ರಸ್ತುತ 29 ಶಾಖೆಗಳನ್ನು ಹೊಂದಿದ್ದು, 1313 ಕೋಟಿ ರೂ. ಮೊತ್ತದ ಠೇವಣಿ ಇಡಲಾಗಿದ್ದು, 807 ಕೋಟಿ ರೂ. ಸಾಲದ ರೂಪದಲ್ಲಿ ವಿತರಿಸಲಾಗಿದೆ. ಸುಕೋ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹೊಸ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ್ದು ಗ್ರಾಹಕರು ಆ್ಯಪ್ ಮೂಲಕ ವ್ಯವಹಾರವನ್ನು ನಡೆಸಬೇಕು ಎಂದು ಕೋರಿದರು.

ಸದಾಕಾಲ ತಂತ್ರಜ್ಞಾನ ಮತ್ತು ಆಧುನಿಕತೆಗಳನ್ನು ದೈನಂದಿನ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮವಾದ ಗ್ರಾಹಕರ ಸೇವೆ ನೀಡುವ ಮೂಲಕ ಪ್ರಥಮಗಳ ಗೌರವದ ಕೀರ್ತಿ ಪಡೆದಿದೆ. ಗ್ರಾಹಕರ ವಿಶ್ವಾಸ, ಷೇರುದಾರರ ಬೆಂಬಲ ಮತ್ತು ಗುಣಮಟ್ಟದ ಸೇವೆಯ ಮೂಲಕ ದಿನೇದಿನೆ ವೃದ್ಧಿಗೊಳ್ಳುತ್ತಿರುವ ಸುಕೋ ಬ್ಯಾಂಕ್ ವ್ಯವಹಾರಕ್ಕೆ ಪಾರದರ್ಶಕತೆ, ತ್ವರಿತ ಸೇವೆ ಮತ್ತು ಸಕಾಲಿಕವಾಗಿ ಬಿಡುಗಡೆಯಾಗುತ್ತಿರುವ ಸಾಲಗಳೇ ಕಾರಣವಾಗಿದೆ ಎಂದರು. ಬ್ಯಾಂಕ್ ವ್ಯವಸ್ಥಾಪಕದ ನಿರ್ದೇಶಕ ಜಿ.ಎಸ್.ರವಿಸುಧಾಕರ್ ಇದ್ದರು.