ಬಳ್ಳಾರಿ ತಾಲೂಕಿನ ಕೊರ‌್ಲಗುಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಷತ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. 
ಜಿಲ್ಲೆ

ಪಾಲಕರ ಆಸೆ ಪೂರೈಸಬೇಕು ಮಕ್ಕಳು - ಲಿಂಗಾಯತ ಮಹಾಜನ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಿವಾಸ ಪಾಟೀಲ್ ಹೇಳಿಕೆ

ಬಳ್ಳಾರಿ: ತಂದೆ ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ವ್ಯಕ್ತಿಗಳಾಗಲಿ ಎಂಬ ಸದಾಶಯದಿಂದ ಶಾಲೆಗೆ ಕಳುಹಿಸುತ್ತಾರೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಅವರ ಆಸೆಗಳನ್ನು ಈಡೇರಿಸಬೇಕು ಎಂದು ವಿಶ್ವ ಲಿಂಗಾಯತ ಮಹಾಜನ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಿವಾಸ ಪಾಟೀಲ್ ಹೇಳಿದರು.

ತಾಲೂಕಿನ ಕೊರ‌್ಲಗುಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಷತ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್, ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಅಂಟಿಕೊಳ್ಳದೆ ಸದಾ ಪಠ್ಯ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಐಎಎಸ್, ಐಪಿಎಸ್ ಸೇರಿದಂತೆ ಯಾವುದೇ ಹುದ್ದೆ ಪಡೆಯಲು ಇಂದಿನಿಂದಲೇ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸಮಾಜ ಸೇವೆ, ದೇಶಭಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದರು.

ಉಪಾಧ್ಯಕ್ಷ ದೊಡ್ಡಬಸವನಗೌಡ ಚೇಳ್ಳಗುರ್ಕಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನಾವು ಇಂದು ಏನು ಶ್ರಮವಹಿಸಿ ಕಲಿಯುತ್ತೇವೆಯೋ ಅದೇ ಆಗುವುದು. ಸಮಾಜ ಸೇವೆ ರೂಢಿಸಿಕೊಳ್ಳಲು ನಮಗೆ ಶಿಕ್ಷಣವೇ ಪ್ರೇರಣೆ ನೀಡಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.

ಗ್ರಾಪಂ ಸದಸ್ಯರಾದ ರಾಮಚಂದ್ರ, ದಾನಪ್ಪ, ಜಂಬಣ್ಣ ಮತ್ತು ಗಾದಿಲಿಂಗಪ್ಪ, ಮುಖ್ಯಶಿಕ್ಷಕ ಜಾಕೂಬ್, ಮುಖಂಡರಾದ ನಾಗನಗೌಡ ಕೊರ‌್ಲಗುಂದಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಂಜುನಾಥಸ್ವಾಮಿ, ಶಿಕ್ಷಕರಾದ ಮಧುಮೋಹನ್, ಶಿವಾಜಿರಾಥೋಡ್, ಪಾವನಿ, ಕಲಾ, ಗ್ರಂಥಪಾಲಕರಾದ ರಮೇಶ್, ಗುರುಬಸಯ್ಯ ಸ್ವಾಮಿ ಇತರರಿದ್ದರು.