ಜಿಲ್ಲೆ

ವಿಶೇಷ ಬಸ್ ಕಾರ್ಯಾಚರಣೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ: ಜಿಲ್ಲೆಯಿಂದ ಜೋಗ್ ಹಾಗೂ ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗಬಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೋಗ್ ಫಾಲ್ಸ್ : ನಗರದಿಂದ ಬೆಳಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 02 ಗಂಟೆಗೆ ಜೋಗ್ ಫಾಲ್ಸ್ ಗೆ ತಲುಪಲಿದೆ (ವಯಾ ಬಳ್ಳಾರಿ-ಚಳ್ಳಕೆರೆ- ಚಿತ್ರದುರ್ಗ- ಚನ್ನಗಿರಿ- ಶಿವಮೊಗ್ಗ- ಸಾಗರ-ಜೋಗ್ ಫಾಲ್ಸ್) ಹಾಗೂ ಗೋಕಾಕ್ ಫಾಲ್ಸ್ಗೆ ನಗರದಿಂದ ಬೆಳಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 01.15 ಕ್ಕೆ ಗೋಕಾಕ್ ಫಾಲ್ಸ್ ಗೆ ತಲುಪಲಿದೆ (ವಯಾ ಹೊಸಪೇಟೆ-ಕೊಪ್ಪಳ- ಗದಗ- ನವಲಗುಂದ- ನರಗುಂದ- ಹುಲಿಕಟ್ಟಿ- ಮನೊಳ್ಳಿ- ಯರಗಟ್ಟಿ- ಮಮದಾಪುರ) ಮೂಲಕ ತಲುಪಲಿದೆ. ಮರಳಿ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಬೆಳಗ್ಗೆ 04 ಗಂಟೆಗೆ ಎರಡು ಬಸ್‌ಗಳು ಬಳ್ಳಾರಿಗೆ ತಲುಪಲಿದೆ. ಈ ಸಾರಿಗೆಯು ಸೆ.13 ರಿಂದ ಪ್ರತಿ ಶನಿವಾರ ಮತ್ತು ಪ್ರತಿ ರವಿವಾರ ಸಾರಿಗೆ ಇರಲಿದೆ ಎಂದು ತಿಳಿಸಿದ್ದಾರೆ.