ಬಳ್ಳಾರಿಯ ರೈಲು ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಶಿವಮೊಗ್ಗ-ಚೆನ್ನೈ ಎಕ್ಸ್‌ಪ್ರೆಸ್ ರೈಲನ್ನು ಸ್ವಾಗತ ಮಾಡಿಕೊಂಡರು. 
ಜಿಲ್ಲೆ

ಶಿವಮೊಗ್ಗ-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಸ್ವಾಗತ ಕೋರಿದ ಕ್ರಿಯಾ ಸಮಿತಿ

ಬಳ್ಳಾರಿ: ಶಿವಮೊಗ್ಗದಿಂದ ಬಳ್ಳಾರಿ ಮೂಲಕ ಚೆನ್ನೈಗೆ ತೆರಳುವ ನೂತನ ಎಕ್ಸ್‌ಪ್ರೆಸ್ ರೈಲನ್ನು ನಗರದ ರೈಲು ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಸ್ವಾಗತ ಮಾಡಿಕೊಂಡರು.

ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ಮಾತನಾಡಿ, ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ಚಿತ್ರದುರ್ಗ-ರಾಯದುರ್ಗ-ಬಳ್ಳಾರಿ ಗುಂತಕಲ್-ತಿರುಪತಿ ಸನಿಹದ ರೇಣಿಗುಂಟ ಮಾರ್ಗವಾಗಿ ಚೆನ್ನೈಗೆ ಹೋಗುವ ನೂತನ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸೇವೆಯು ಇಂದು ಆರಂಭವಾಗಿದೆ. ವಾರದಲ್ಲಿ 2 ದಿನ ಸಂಚರಿಸುವ ಈ ರೈಲು 6 ವಾರಗಳವರೆಗೆ ಪ್ರಾಯೋಗಿಕವಾಗಿ ಸಂಚಾರ ಮಾಡುತ್ತದೆ. ಆರಂಭದ ದಿನ ಈ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲ ಸೀಟ್‌ಗಳು ಭರ್ತಿಯಾಗಿವೆ. ಈ ಭಾಗದ ಜನತೆ ಹೆಚ್ಚಾಗಿ ಈ ರೈಲಿನ ಸೌಲಭ್ಯ ಪಡೆದಲ್ಲಿ ಇದು ಕಾಯಂ ಆಗಲಿದೆ ಎಂದರು.

ಪದಾಧಿಕಾರಿಗಳಾದ ಪಿ.ಬಂಡೇಗೌಡ, ಕೋಳೂರು ಚಂದ್ರಶೇಖರಗೌಡ, ಎಚ್.ಕೆ.ಗೌರಿಶಂಕರ, ಕೆ.ಎಂ. ಕೊಟ್ರೇಶ್, ದಿವಾಕರ, ಸೂರ್ಯಪ್ರಕಾಶ, ರುದ್ರಮುನಿಸ್ವಾಮಿ, ಹಾಗೂ ಶಿವಮೊಗ್ಗ ರೈಲ್ವೆ ಕ್ರಿಯಾ ಸಮಿತಿಯ ಸುರೇಶ್ ಶೆಟ್ಟಿ, ಡಾ.ಕೆ.ಎಂ.ಆದರ್ಶ, ಡಾ.ಮಧು, ನವೀನ್‌ಕುಮಾರ್, ಮರಿಹಂಪಣ್ಣ, ಅಶೋಕಸ್ವಾಮಿ, ಎ.ಎಂ.ಸ್ವಾಮಿ ಇತರರು ಇದ್ದರು.