ಜಿಲ್ಲೆ

ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ದರ್ಶಿನಿ ಅರಿವು ಗ್ರಂಥಾಲಯ ಕೇಂದ್ರಗಳ ಮೂಲಕ ಜ್ಞಾನ ನೀಡಿದರೆ ವಿಕಲಚೇತನರು ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯಎಂದು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಹೇಳಿದರು.

ನಗರದ ತಾಪಂ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ದರ್ಶಿನಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿಕಲ ಚೇತನರಿಗೆ ಗ್ರಾಪಂ ಮೇಲ್ವಿಚಾರಕರು ಹಾಗೂ ತಾಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು ವಿವಿಧ ಪುಸ್ತಕಗಳ ಮೂಲಕ ಜ್ಞಾನ ಹಂಚಿ ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಮಾನವನು ಶಿಕ್ಷಣದಿಂದ ಮಾತ್ರ ಉತ್ತಮವಾದ ಉದ್ಯೋಗ, ಭವಿಷ್ಯ, ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳಿಸಿಕೊಳ್ಳಲು ಸಾಧ್ಯಎಂದು ಸಲಹೆ ನೀಡಿದರು

ಕಾರ್ಯಾಗಾರದಲ್ಲಿ ಅಂಗವಿಕಲತೆಯುಳ್ಳ ಮಕ್ಕಳು ಎದುರಿಸುತ್ತಿರುವ ಅಡೆ-ತಡೆ, ವಿವಿಧ ಬಗೆಯ ಅಂಗವಿಕಲತೆ, ಅಂಗವಿಕಲ ವ್ಯಕ್ತಿಗಳ ಹಕ್ಕು, ದರ್ಶಿನಿ ಅರಿವು ಗ್ರಂಥಾಲಯ ಕೇಂದ್ರಗಳ ಪರಿಚಯ, ಅರಿವು ಕೇಂದ್ರಗಳಲ್ಲಿ ಸುಗಮ ಹಾಗೂ ಅಡೆ-ತಡೆ ಮತ್ತು ಸಂಪನ್ಮೂಲದ ಮೂಲ, ಅಂಧತ್ವವುಳ್ಳ ಮಕ್ಕಳಿಗಾಗಿ ಪೂರೈಸಿರುವ ಸಹಾಯಕ ಸಾಧನ ಪರಿಚಯ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.