ಜಿಲ್ಲೆ

ಲೈಂಗಿಕ ಕಿರುಕುಳ ಆರೋಪಿ ಸೆರೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಸಾಮಾಜಿಕ ಜಾಲತಾಣದಲ್ಲಿ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕರ್ನಾಟಕ ಮೂಲದ ಆರೋಪಿಯನ್ನು ಮುಂಬೈ ಪೊಲೀಸರು ಸಂಡೂರಿನಲ್ಲಿ ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮನೋಜ್ ಪ್ರಸಾದ್ ಬಂಧಿತ. ಆರೋಪಿಯು ಎಐ ಬಳಸಿ ಆಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದ. ನಂತರ ಮಹಿಳೆಯರಿಗೆ ವೀಡೀಯೊ ಕರೆ ಮಾಡಿ ನಗ್ನವಾಗುವಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಆತನ ಮೊಬೈಲ್‌ನಲ್ಲಿ 13 ಸಾವಿರಕ್ಕೂ ಅಧಿಕ ಹೆಚ್ಚು ಹುಡುಗಿಯರ ಪೋಟೋಗಳು ಸಂಗ್ರಹವಾಗಿರುವುದು ಪತ್ತೆಯಾಗಿದೆ.

ಈಚೆಗೆ ಇನ್ಸ್‌ಸ್ಟಾ ಗ್ರಾಮ್‌ನಲ್ಲಿ ಪರಿಚಯವಾದ ಹುಡುಗಿಯನ್ನು ಪರಿಚಯಿಸಿಕೊಂಡು ನಗ್ನ ವೀಡೀಯೊ ಕರೆ ಮಾಡುವಂತೆ ಒತ್ತಡ ಹೇರಿದ್ದಾನೆ. ಅವಳು ನಿರಾಕರಿಸಿದಾಗ ಅವಳ ಹೆಸರಿನಲ್ಲಿ ನಕಲಿ ಖಾತೆಯೊಂದು ತೆರೆದು ಎಐಯಿಂದ ತಯಾರಿಸಲಾದ ಅವಳ ಆಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾನೆ ಎಂದು ಯುವತಿಯೊಬ್ಬರು ಮುಂಬೈನ ದಹಿಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಐಪಿ ವಿಳಾಸದ ಆಧಾರದ ಮೇಲೆ ಸಂಡೂರಿನಲ್ಲಿ ಬಂಧಿಸಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.

==