ಜಿಲ್ಲೆ

30.49 ಲಕ್ಷ ರೂ. ಎಲೆಕ್ಟ್ರಿಕಲ್ ಉಪಕರಣಗಳ ವಶ

ಬಳ್ಳಾರಿ : ಆಂಧ್ರ ಹಾಗೂ ಜಿಲ್ಲೆಯ ವಿವಿಧಡೆ ಏರ್‌ಟೆಲ್, ಜಿಯೊ ಟವರ್‌ನ ಬ್ಯಾಟರಿಗಳನ್ನು ಕಳ್ಳತನ ಎಸಗಿದ್ದ, ನಾಲ್ವರು ಆರೋಪಿಗಳನ್ನು ಬಂಧಿಸಿ, 30.49 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್ ಉಪಕರಣಗಳನ್ನು ಗುರುವಾರ ವಶಪಡಿಸಿಕೊಳ್ಳಲಾಗಿದೆ.

ಉತ್ತರಪ್ರದೇಶದ ನಿವಾಸಿಗಳಾದ ಅನಾಸ್, ಇಕ್ತಾರ್, ವಿಲ್ಲಾ ನವಾಜ್, ಅರೆಹಾನ್ ಬಂಧಿತರು. ಜಿಲ್ಲೆಯ ಕುಡಿತಿನಿ ಒಂದು, ಪಿಡಿ ಹಳ್ಳಿ ನಾಲ್ಕು, ಗ್ರಾಮಾಂತರ ಹಾಗೂ ಆಂಧ್ರದ ಪೊಲೀಸ್ ಠಾಣೆಗಳಲ್ಲಿ ತಲಾ ಐದು ಸೇರಿ ಒಟ್ಟು ಹದಿನೈದು ಪ್ರಕರಣ ಆರೋಪಿಗಳು ವಿರುದ್ಧ ದಾಖಲಾಗಿದ್ದವು. ಆರೋಪಿತರಿಂದ 30.49 ಲಕ್ಷ ರೂ. ಮೌಲ್ಯದ 26 ಬ್ಯಾಟರಿಗಳು ಮತ್ತು ಐದು ಲಕ್ಷ ರೂ. ಮೌಲ್ಯದ ಲಗೇಜ್ ಪಿಕಪ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

==