ಜಿಲ್ಲೆ

ಬಳ್ಳಾರಿಯಲ್ಲಿ ಆರ್‌ಎಂಪಿ ಕ್ಲಿನಿಕ್ ಸೀಜ್, ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ

ಬಳ್ಳಾರಿ: ತಹಸೀಲ್ದಾರ್ ಯು.ನಾಗರಾಜ ಹಾಗೂ ಟಿಎಚ್‌ಒ ಅಬ್ದುಲ್ಲಾ ಗುರುವಾರ ನಗರದ ಮುಂಡ್ರಿಗಿ ಪ್ರದೇಶದ ಆರ್‌ಎಂಪಿ ಕ್ಲಿನಿಕ್ ಮೇಲೆ ದಾಳಿ ನಡೆಸಿದರು. ಸೋಮಶೇಖರ ಎಂಬಾತ ನಕಲಿ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ. ಸೋಮಶೇಖರ ಬಳಿ ರಾಜ್ಯ ಮೆಡಿಕಲ್ ಅಸೋಸಿಯೇಷನ್‌ಗೆ ಸಂಬಂಧಿಸಿದ ಯಾವುದೇ ಪ್ರಮಾಣ ಪತ್ರ ಇರಲಿಲ್ಲ. ಕ್ಲಿನಿಕ್ ಸೀಜ್ ಮಾಡಿ ಸೋಮಶೇಖರನನ್ನು ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.