ಬಳ್ಳಾರಿ : ಇಲ್ಲಿನ ಹವಂಬಾವಿಯ ರೆಡ್ಡಿ ನಿವಾಸದ ಬಳಿಯಿರುವ ಮೂರು ಎಕರೆ ಖಾಲಿ ಸ್ಥಳವನ್ನು ರಾಮುಲು ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪದಿಂದ ಆಸ್ತಿ ವಿಚಾರದಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲುಗೆ ವೈಮನಸ್ಸು ಮೂಡಿದೆ ಎನ್ನಲಾಗಿದೆ.
ರೆಡ್ಡಿ ಹಾಗೂ ರಾಮುಲು ಎರಡು ಮನೆಗಳ ನಡುವೆ ಮೂರು ಎಕರೆದಷ್ಟು ಖಾಲಿ ಸ್ಥಳ ರೆಡ್ಡಿಗೆ ಸೇರಿದೆ. ಅಕ್ರಮಗಣಿಗಾರಿಕೆ ಆರೋಪದಡಿ ರೆಡ್ಡಿ ಜೈಲು ಸೇರಿದ ಬಳಿ ರಾಮುಲು ಆ ಸ್ಥಳದಲ್ಲೇ ವಾಕಿಂಗ್ ಹಾಗೂ ಹಸುಗಳು ಕಟ್ಟುತ್ತಿದ್ದರು. ಇದಲ್ಲದೆ, ರಾಮುಲು ಕೆಲಸದವರಿಗೆ ಮನೆಯ ಕೂಡ ನಿರ್ಮಿಸಿದ್ದರು. ಈ ವಿಷಯ ತಿಳಿದ ರೆಡ್ಡಿ ಬೆಂಬಲಿಗರು ಹಸುಗಳು ಹಾಗೂ ಮನೆಯ ಕೆಲಸದವರನ್ನು ಸ್ಥಳದಿಂದ ಹೊರಗೆ ಹಾಕಿ ಮನೆಗೆ ಹಾಗೂ ಕೌಂಪೌಂಡ್ ಬೀಗ ಹಾಕಲಾಗಿದೆ. ವಿಷಯ ತಿಳಿದ ರಾಮುಲು ವಾಸ್ತು ನೆಪದಲ್ಲಿ ಕೌಂಪೌಂಡಿಗೆ ಗೋಡೆ ನಿರ್ಮಿಸಿ ಬಂದ್ ಮಾಡಿದರು. ಅಲ್ಲಿಂದಲೇ ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಗೇಟ್ ಬಂದ್ ಮಾಡಿರುವ ವಿಚಾರವನ್ನು ರೆಡ್ಡಿ ತನ್ನ ಅಪ್ತ ಬಳಗದ ಜತೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.