ಜಿಲ್ಲೆ

ರಂಗೇರಿದ ಉಪಚುನಾವಣೆ ಕಣ

ಎಸ್.ಎರ್ರಿಸ್ವಾಮಿ

ಬಳ್ಳಾರಿ :ಸಂಡೂರು ಉಪಚುನಾವಣೆಯ ಪ್ರಚಾರ ಕಳೆದ ಕೆಲ ದಿನಗಳಿಂದ ಮಂಕಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆಯಾದ ದಿನದಿಂದಲೇ ಎರಡು ಪಕ್ಷದ ರಾಜ್ಯ ನಾಯಕರು ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ರಂಗೇರಿದೆ. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ವಿಷಯಗಳೆ ಪ್ರಸ್ತಾಪಿಸದೆ ಹೊರಗಿನ ಹಾಗೂ ಸ್ಥಳೀಯ ನಾಯಕರಿಗೆ ಮನ್ನಣೆ ಎಂಬ ಚರ್ಚೆ ಜೋರಾಗಿದೆ. ಇತ್ತ ಬಿಜೆಪಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಆಸಕ್ತಿ ವಹಿಸುತ್ತಿಲ್ಲ ಪಕ್ಷದ ವಿರುದ್ಧ ಅಸಮಾಧಾನವಿದೆ ಎಂಬ ಅನುಮಾನವಿತ್ತು. ರೆಡ್ಡಿ ಹಾಗೂ ರಾಮುಲು ಜತೆಗೂಡಿ ಪ್ರಚಾರ ಆರಂಭಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಜಿಲ್ಲೆಯಲ್ಲಿ ಬಿಜೆಪಿಯ ಹಳೆಯ ವರ್ಚಸ್ಸು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಈ ಬಾರಿ ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧದ ನಡುವೆ ಸಂಸದ ಈ.ತುಕಾರಾಮ್ ಪತ್ನಿಗೆ ಟಿಕೆಟ್ ನೀಡಿರುವುದರಿಂದ ಸ್ವತಃ ಕಾರ್ಮಿಕ ಸಚಿವ ಸಂತೋಷ ಲಾಡ್ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದ ಬಿಟಿಪಿಎಸ್, ಜಿಂದಾಲ್ ಕಾರ್ಮಿಕರ ಜತೆ ಸಭೆ ನಡೆಸಿ ಕಾರ್ಮಿಕರ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದಿದ್ದಾರೆ. ಒಟ್ಟಾರೆ ಕಳೆದ ಕೆಲ ದಿನಗಳಿಂದ ಅಭ್ಯರ್ಥಿಗಳಿಂದ ಪ್ರಚಾರ ನಡೆಸುತ್ತಿದ್ದರು. ಸದ್ಯ, ರಾಜ್ಯ ನಾಯಕರು ಪ್ರಚಾರದಲ್ಲಿ ತೊಡಗಿರುವುದರಿಂದ ಉಪ ಚುನಾವಣೆ ಕಾವೇರಿದೆ.