ಜಿಲ್ಲೆ

ರೈಲ್ವೆ ಅಂಡರ್‌ ಪಾಸ್ ಉದ್ಘಾಟನೆ

ಎಸ್.ಎರ್ರಿಸ್ವಾಮಿ

ಬಳ್ಳಾಾರಿ : ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ರೈಲ್ವೆೆ ಅಂಡರ್ ಪಾಸ್ ಅನ್ನು ಎಮ್ಮಿಗನೂರು ಮಹಾಂತರ ಸಂಸ್ಥಾಾನ ಮಠದ ಶ್ರೀವಾಮದೇವ ಮಹಾಂತ ಶಿವಾಚಾರ್ಯ ಸ್ವಾಾಮೀಜಿ, ಕೊಟ್ಟೂರು ಸಂಸ್ಥಾನ ಮಠದ ಶ್ರೀಕೊಟ್ಟೂರು ಬಸವಲಿಂಗ ಸ್ವಾಮೀಜಿ, ಶಾಸಕ ನಾರಾಭರತ್ ರೆಡ್ಡಿ ಹಾಗೂ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಭಾನುವಾರ ಉದ್ಘಾಟಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ನಗರದ ಸಮಗ್ರ ಅಭಿವೃದ್ಧಿ ನನ್ನ ಕನಸಾಗಿದೆ. ಈ ದಿಸೆಯಲ್ಲಿ ಹತ್ತಾರು ಯೋಜನೆಗಳ ಮೂಲಕ ಪ್ರಗತಿದಾಯಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜನರ ಓಡಾಟಕ್ಕೆೆ ರಸ್ತೆೆ ಮುಕ್ತ: ಕಳೆದ ಎರಡೂವರೆ ತಿಂಗಳಿನಿಂದ ಕಾಮಗಾರಿ ನಡೆದಿತ್ತು. ಇದರಿಂದ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆೆ ತೀವ್ರ ಪರದಾಟವಾಗಿತ್ತು. ಕಾಮಗಾರಿ ಪೂರ್ಣಗೊಂಡರೂ ಸಾರ್ವಜನಿಕರ ಓಡಾಟಕ್ಕೆೆ ಅನುವು ಮಾಡಿಕೊಡುತ್ತಿಲ್ಲ ಎಂದು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ, ಸಿಪಿಐಎಂ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್ ಬ್ರೀಡ್ಜ್ ರಸ್ತೆೆಯನ್ನು ಓಡಾಟಕ್ಕೆೆ ಮುಕ್ತಗೊಳಿಸುತ್ತಿದ್ದಂತೆಯೇ ಸಾರ್ವಜನಿಕರು ನಿರಾಳಗೊಂಡರು.

ಬಾಕ್ಸ್ : ರೈಲ್ವೆೆ ಕೆಳಸೇತುವೆ ರಸ್ತೆೆಯ ಮರು ಸಂಚಾರ ಕಾರ್ಯಕ್ರಮ ಹಿನ್ನೆೆಲೆಯಲ್ಲಿ ಎರಡು ಬದಿಯ ಗೋಡೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಸುವರ್ಣ ಬಳ್ಳಾರಿಯ ಫಲಕವು ವಿದ್ಯುತ್ ದೀಪದಿಂದ ಗಮನ ಸೆಳೆಯಿತು. ಕಾರ್ಯಕ್ರಮ ಚಾಲನೆ ಸಿಗುತ್ತಿದ್ದಂತೆಯೇ ಕಾಂಗ್ರೆೆಸ್ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.