ಬಳ್ಳಾರಿ ; ನಗರದಲ್ಲಿ ಶ್ರೀ ಸತ್ಯ ಸಾಯಿಬಾಬಾ ಅವರ ಶತವರ್ಷ ಜನ್ಮೋತ್ಸವ ಅಂಗವಾಗಿ ಜು 31 ರಂದು ‘ ಪ್ರೇಮವಾಹಿನಿ ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸತ್ಯಸಾಯಿ ಸೇವಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜು. 31 ರಂದು ಬೆಳಗ್ಗೆ ರಥೋತ್ಸವಕ್ಕೆ ತಾಲೂಕಿನ ಚೆಳ್ಳಗುರ್ಕಿ ಶ್ರೀಎರ‌್ರಿತಾತ ದೇವಸ್ಥಾನ ಆವರಣದಲ್ಲಿ ಪೂಜೆ ನೆರವೇರಿಸಲಾಗುವುದು. ಬಳಿಕ ನಗರದ ತಾರಾನಾಥ ಆರ್ಯುವೇದ ಕಾಲೇಜಿನಿಂದ ಕುಮಾರಸ್ವಾಮಿ ದೇವಸ್ಥಾನದವರೆಗೆ ರಥೋತ್ಸವ ಜತೆಯಲ್ಲಿ ಬೈಕ್ ರ‌್ಯಾಲಿ ನಡೆಸಲಾಗುವುದು. ನಂತರ ಕುಮಾರಸ್ವಾಮಿ ದೇವಸ್ಥಾನದಿಂದ ಕನಕದುರ್ಗಮ್ಮ ದೇವಸ್ಥಾನದವರೆಗೆ ಕಲಾ ತಂಡ, ಬಾಲವಿರಾಸ ಮಕ್ಕಳ ವೇಷಧಾರಣಿ, ಭಜನೆ, ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಸಂಗನಕಲ್ಲು ರಸ್ತೆಯಲ್ಲಿನ ಭಾರತೀ ತೀರ್ಥ ಸಭಾಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಮೆರಿಟ್ ಸಂಗೀತ ಕಲಾವಿದರಿಂದ ಕಾರ್ಯಕ್ರಮ ಹಾಗೂ ಸ್ವಾಮಿ ಅವರ ದರ್ಶನ ವ್ಯವಸ್ಥೆ ಇರಲಿದೆ.