ಜಿಲ್ಲೆ

ಇಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ : ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್‌ಗಳಿಗೆ ಅಡ್ಡಲಾಗಿರುವ ಮರ ಕತ್ತರಿಸುವ ಕಾರ್ಯ ಕೈಗೊಳ್ಳುತ್ತಿರುವುದರಿಂದ ಮೇ 18 ರಂದು ಬೆಳಗ್ಗೆ 09 ಗಂಟೆಯಿಅದ ಸಂಜೆ 05 ಗಂಟೆಯವರೆಗೆ ರಾಘವ ಕಲಾ ಮಂದಿರ, ಅನಂತಪುರ ರಸ್ತೆ, ವಡ್ಡರಬಂಡೆ, ಗ್ರಾಮ ರಸ್ತೆ, ಅಗಡಿ ಮಾರೆಪ್ಪ ಕಾಂಪೌಂಡ್, ರೂಪನಗುಡಿ ರಸ್ತೆ, ಮುಬಾರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ.ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ ಸೇರಿದಂತೆ ಮುಂತಾದ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.