ಜಿಲ್ಲೆ

ವಿದ್ಯುತ್ ವ್ಯತ್ಯಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಡಿ ವಿದ್ಯುತ್ ಕಬ್ಬಿಣದ ಕಂಬಗಳ ಬದಲಾವಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಡಿ.22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಗರದ ವಿವಿಧಡೆ ವಿದ್ಯುತ್ ವ್ಯತ್ಯಯವಾಗಲಿದೆ. ಗಣೇಶ ಕಾಲನಿ, ಸಿದ್ಗಿ ಕಾಲನಿ, ಗೊಲ್ಲನರಸಪ್ಪ ಕಾಲನಿ, ಎಂಎಂಟಿಸಿ ಕಾಲನಿ, ಮಾರುತಿ ನಗರ, ಹುಸೇನ ನಗರ, ರಾಮಯ್ಯ ಕಾಲನಿ, ರಾಘವೇಂದ್ರ ಕಾಲನಿ 1ನೇ ಹಂತ, ಅನಂತಪುರ ರಸ್ತೆ, ಪಟೇಲ್ ನಗರ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಗರ ಜೆಸ್ಕಾಂ ಉಪವಿಬಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.