ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಸಂಚಾರಿ ಇನ್ಸ್‌ಪೆಕ್ಟರ್ ನಾಗರಾಜ ಎಂ. ಮಾಡಳ್ಳಿ ಮಾತನಾಡಿದರು. 
ಜಿಲ್ಲೆ

ಪರ್ಮಿಟ್ ಆಟೋಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುವುದಾಗಿ ಇನ್ಸ್‌ಪೆಕ್ಟರ್ ನಾಗರಾಜ ಎಂ. ಮಾಡಳ್ಳಿ ಸೂಚನೆ

ಬಳ್ಳಾರಿ: ನಗರದ ಪರ್ಮಿಟ್ ಇರುವಂತಹ ಆಟೋಗಳು ಮಾತ್ರ ನಗರದಲ್ಲಿ ಸಂಚರಿಸಬೇಕು ಇಲ್ಲವಾದಲ್ಲಿ ಆಟೊಗಳನ್ನು ಜಪ್ತಿ ಪಡಿಸಿಕೊಂಡು ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಂಚಾರಿ ಇನ್ಸ್‌ಪೆಕ್ಟರ್ ನಾಗರಾಜ ಎಂ. ಮಾಡಳ್ಳಿ ಹೇಳಿದರು.

ನಗರದ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ನಗರ ಆಟೋ ಚಾಲಕರು ಮತ್ತು ಸಂಘದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು. ಆಟೋ ಚಾಲಕರು ಚಾಲನ ಪರವಾನಗಿ, ನೋಂದಣಿ ಪತ್ರ, ವಾಹನ ಇನ್ಸೂರೆನ್ಸ್, ಫಿಟ್‌ನೆಸ್ ಸರ್ಟಿಫಿಕೇಟ್, ಪೊಲಿಷನ್ ಸರ್ಟಿಫಿಕೇಟ್ ದಾಖಲೆಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.

ಆರ್‌ಟಿಒ ಅಧಿಕಾರಿ ಶ್ರೀನಿವಾಸ ಎ.ಆರ್.ಟಿ ಮಾತನಾಡಿ, ಅಗತ್ಯ ದಾಖಲೆಗಳನ್ನು ಚಾಲಕರು ಇಟ್ಟುಕೊಳ್ಳಬೇಕು. ಚಾಲನ ಪರವಾನಗಿ, ಪರ್ಮಿಟ್, ವಾಹನ ನೋಂದಣಿಗೆ ಸಹಾಯ ಮಾಡುವ ಭರವಸೆ ನೀಡಿದರು. ಆಟೋ ಸಂಘದ ಮುಖಂಡರಾದ ತಾಯಪ್ಪ, ರಾಜೇಶ್ ಹುಂಡೇಕರ್, ಬಿ.ಖಾಜಾ ಹಾಗೂ ಚಾಲಕರು ಇದ್ದರು.