ಜಿಲ್ಲೆ

ಆನ್‌ಲೈನ್‌ ನಲ್ಲಿ 25.20 ಲಕ್ಷ ರೂ. ವಂಚನೆ

ಬಳ್ಳಾರಿ ; ಇಲ್ಲಿನ ವ್ಯಕ್ತಿಯೊಬ್ಬರಿಗೆ‌ ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ಕೊಡಿಸುವುದಾಗಿ ನಂಬಿಸಿ, 25.60 ಲಕ್ಷ ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ ನಲ್ಲಿ ಬಂದಿದ್ದ ಜಾಹೀರಾತು ಕ್ಲಿಕ್‌ ಮಾಡಿದ್ದ ವ್ಯಕ್ತಿ ಒಂದು ವಾಟ್ಸಾಪ್‌ ಗ್ರೂಪ್‌ಗೆ ಸೇರಿಸಲಾಗಿತ್ತು. ಅಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಅವರಿಗೆ ವಿವರಿಸಲಾಗಿತ್ತು. ಶೇ. 15ರಷ್ಟು ಲಾಭಾಂಶ ನೀಡುವ ಮಾತು ನಂಬಿದ ವ್ಯಕ್ತಿ ಜುಲೈ 3ರಿಂದ 28ರವರೆಗೆ ವಂಚಕರ ಖಾತೆಗೆ 25.20 ಲಕ್ಷ ರೂ. ಪಾವತಿ‌ ಮಾಡಲಾಗಿದೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.