ಜಿಲ್ಲೆ

ಗಣಿ ನಾಡಿನಲ್ಲಿ ಬುಧವಾರ ಒಂದೇ ದಿನ ಒಂಬತ್ತು ಜನರ ಬಲಿ, 12 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 12066ಕ್ಕೆ ಏರಿಕೆಯಾಗಿದೆ. ಈ ಪೈಕಿ 5298 ಪ್ರಕರಣಗಳು ಸಕ್ರಿಯವಾಗಿವೆ.

ಬುಧವಾರ 515 ಜನರಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿ ತಾಲೂಕಿನಲ್ಲಿ 252, ಹೊಸಪೇಟೆ 98, ಸಂಡೂರು 50, ಹಡಗಲಿ 37, ಸಿರಗುಪ್ಪ 32, ಹರಪನಹಳ್ಳಿ 20, ಹಬೊಹಳ್ಳಿ 17, ಕೂಡ್ಲಿಗಿ ಎಂಟು ಹಾಗೂ ಬೇರೆ ರಾಜ್ಯದ ಒಬ್ಬರಿಗೆ ಸೋಂಕು ತಗುಲಿದೆ. ಒಂದೇ ದಿನ ಒಂಬತ್ತು ಜನ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ 130ಕ್ಕೇರಿದೆ.

ಇದುವರೆಗೆ ಬಳ್ಳಾರಿ ತಾಲೂಕಿನಲ್ಲಿ 5203, ಹೊಸಪೇಟೆ 3020, ಸಂಡೂರು 1658, ಸಿರಗುಪ್ಪ 624, ಹಡಗಲಿ 520, ಕೂಡ್ಲಿಗಿ 359, ಹರಪನಹಳ್ಳಿ 322, ಹಬೊಹಳ್ಳಿ 295, ಬೇರೆ ಜಿಲ್ಲೆಯ 33 ಹಾಗೂ ಇತರ ರಾಜ್ಯದ 32 ಜನರಿಗೆ ಸೋಂಕು ತಗುಲಿದೆ. ಬುಧವಾರ 380 ಜನರು ಚೇತರಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟು 6638 ಜನರು ಸೋಂಕುಮುಕ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ 2153 ಜನರಿಗೆ ರ‌್ಯಾಪಿಡ್ ಆ್ಯಂಟಿಜೆನ್ ಹಾಗೂ 528 ಜನರಿಗೆ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ 76845 ಜನರಿಗೆ ಕರೊನಾ ಪರೀಕ್ಷೆ ನಡೆಸಲಾಗಿದೆ.