ಜಿಲ್ಲೆ

ಎಂಎಸ್‌ಪಿಯಡಿ ಭತ್ತ, ರಾಗಿ, ಜೋಳ ಖರೀದಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಪ್ರಸ್ತಕ ಸಾಲಿನ ಮುಂಗಾರಿನಲ್ಲಿ ಎಂಎಸ್‌ಪಿ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿಸಲಾಗವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನ ತಿಳಿಸಿದ್ದಾರೆ.

*ಬೆಲೆ: ಪ್ರತಿ ಕಿಂಟ್ವಾಲ್‌ಗೆ ಭತ್ತ 2300 ರೂ., ರಾಗಿ 4290 ರೂ., ಬಿಳಿ ಜೋಳ(ಮಾಲ್ದಂಡಿ) 3421 ರೂ., ಬಿಳಿಜೋಳ (ಹೈಬ್ರಿಡ್) 3371 ರೂ. ಖರೀದಿಸಲು ದರ ನಿಗದಿಸಲಾಗಿದೆ. ಇಲ್ಲಿನ ಎಪಿಎಂಸಿ, ಮೋಕಾ, ಕುರುಗೋಡು, ಕಂಪ್ಲಿ, ಸಿರುಗುಪ್ಪ, ಕರೂರು ಮತ್ತು ಹಚ್ಚೋಳ್ಳಿ ಸೇರಿದಂತೆ ಒಟ್ಟು 08 ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದೆ. ನೋಂದಣಿಗೆ ಎನ್‌ಐಸಿ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮುಂದಿನ ಮೂರು ದಿನಗಳೊಗಾಗಿ ಎಲ್ಲ ಖರೀದಿ ಕೇಂದ್ರಗಳನ್ನು ಚಾಲನೆಗೊಳಿಸಿ, ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

====