ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ. 
ಜಿಲ್ಲೆ

ಬಳ್ಳಾರಿಯ 39 ವಾರ್ಡ್‌ಗಳಿಂದ ಸ್ಪರ್ಧೆ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾಹಿತಿ

ಬಳ್ಳಾರಿ: ನಗರದ ಮಹಾನಗರ ಪಾಲಿಕೆ ಚುನಾವಣೆಗೆ 39 ವಾರ್ಡ್‌ಗಳಿಗೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಭ್ರಷ್ಟಾಚಾರ ರಹಿತ, ಆಡಳಿತ ಆಮಿಷವಿಲ್ಲದೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ಹಣ ವೆಚ್ಚ ಮಾಡುವ ಅಭ್ಯರ್ಥಿ ನಮಗೆ ಬೇಕಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿದ್ದರೆ ಸಾಕು ಎಂದರು.

ಆಡಳಿತ ಪಕ್ಷದ ವಿರುದ್ಧ ಯಾವುದೇ ತನಿಖೆಯಾಗಲಿ ಅದು ಬರಿ ನಾಟಕ. ಅಧಿಕಾರ ದುರ್ಬಳಕೆ ಮಾಡಿಕೊಂಡ ರಮೇಶ ಜಾರಕಿಹೊಳಿ, ಯುವತಿಯನ್ನು ಬಳಸಿಕೊಂಡಿದ್ದಾರೆ. ಎಸ್‌ಐಟಿ ತನಿಖೆಯಿಂದ ನೈಜತೆ ಮುಚ್ಚಿಹಾಕಲು ಸರ್ಕಾರ ಪ್ರಯತ್ನಪಡುತ್ತಿದೆ ಎಂದು ಆರೋಪಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಕಾಪು ಶ್ರೀನಿವಾಸ ರೆಡ್ಡಿ, ಕಾರ್ಯಕರ್ತರಾದ ಪಿ.ನಾರಾಯಣಕುಮಾರ್, ತಸ್ಲಿಮಾ, ಎ.ಕೃಷ್ಣಬಾಯಿ, ಲೋಕೇಶ್, ಭಾಗ್ಯಮ್ಮ, ಚಿದಾನಂದ ಇತರರಿದ್ದರು.