ಜಿಲ್ಲೆ

ಅಪೌಷ್ಠಿಕ ಮಕ್ಕಳ ತಪಾಸಣೆ ನಡೆಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯಲ್ಲಿ ತೀವ್ರ ಹಾಗೂ ಮಧ್ಯಮ ಅಪೌಷ್ಟಿಕತೆ ಇರುವ ಮಕ್ಕಳ ಆರೋಗ್ಯ ನಿಯಮಿತವಾಗಿ ತಪಾಸಣೆ ನಡೆಸಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಹೇಳಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಕುರಿತು ವರ್ಚುವಲ್ ಮೂಲಕ ವೈದ್ಯಾಧಿಕಾರಿಗಳೊಂದಿಗೆ ುಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮೇಳ ವಿಧದಲ್ಲಿ ಆಯೋಜಿಸಬೇಕು. ತಪಾಸಣೆ ಸಮಯದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಖುದ್ದು ಹಾಜರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಯುವ ಮುನ್ನ ದಾಖಲಾದ ಎಲ್ಲ ಮಕ್ಕಳ ಹಾಜರಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಂತರ ಆರೋಗ್ಯ ತಪಾಸಣೆ ನಂತರ ನಿಗದಿತ ಸಮಯದಲ್ಲಿ ವರದಿ ನೀಡಬೇಕು ಎಂದು ಹೇಳಿದರು.

ಬಳಿಕ ಜಿಲ್ಲೆಯಲ್ಲಿನ ಗರ್ಭಿಣಿಯರ ರಕ್ತಹೀನತೆ, ಅಧಿಕ ರಕ್ತದೊತ್ತಡ ನಿರ್ವಹಣೆಯ ಕುರಿತು ಕಾಳಜಿವಹಿಸಬೇಕು. ಗರ್ಭಿಣಿಯರ ತಾಯಿ ಕಾರ್ಡ್ ಪರಿಶೀಲಿಸಬೇಕು. ಕಬ್ಬಿಣಾಂಶ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಗಮನಿಸಬೇಕು ಎಂದು ಸೂಚಿಸಿದರು. ಡಿಎಚ್‌ಒ ಡಾ.ವೈ.ರಮೇಶಬಾಬು, ವೈದ್ಯಾಧಿಕಾರಿಗಳಾ ಡಾ.ಆರ್.ಅಬ್ದುಲ್ಲಾ, ಡಾ.ಹನುಮಂತಪ್ಪ ಇದ್ದರು.

==