ಬಳ್ಳಾರಿ ಸರಳಾದೇವಿ ಕಾಲೇಜು ಮುಂಭಾಗ ಗುರುವಾರ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ, ಯುವತಿಯರು, ಯುವಕರು ಪ್ರತಿಭಟನೆ ನಡೆಸಿದರು.  
ಜಿಲ್ಲೆ

ಗಣಿನಾಡಲ್ಲಿ ಮುಂದುವರಿದ ಹಿಜಾಬ್ ವಿವಾದ

ಬಳ್ಳಾರಿ: ಹಿಜಾಬ್ ವಿವಾದ ಗುರುವಾರವೂ ಮುಂದುವರಿದಿದ್ದು, ನಗರದ ಸರಳಾದೇವಿ ಹಾಗೂ ಮಹಿಳಾ ಕಾಲೇಜಿನ ಬಳಿ ಹೈ ಡ್ರಾಮಾ ನಡೆಯಿತು.

ಬೆಳಗ್ಗೆ ಉದ್ರಿಕರ ಗುಂಪೊಂದು ಹಜಾಬ್ ಕುರಿತು ಅತಿರೇಕವಾಗಿ ವರ್ತಿಸಿದ್ದರಿಂದ ಪೊಲೀಸರ ಸಹನೆ ಕಟ್ಟೆಯೊಡೆಯಿತು. ಒಬ್ಬ ಯುವಕ ಪೊಲೀಸರ ಜತೆ ವಾಗ್ವಾದಕ್ಕಿಳಿದು ಹಿಜಾಬ್ ಧರಿಸಲು ಅನುಮತಿಸಬೇಕು ಎಂದು ಆಗ್ರಹಿಸಿದ. ನಂತರ ಯುವಕನನ್ನು ಗದರಿಸಿ, ಆತನಲ್ಲಿದ್ದ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದರು. ಇದರಿಂದ ಕೆರಳಿದ ಯುವಕ ಸಮೀಪದ ಕೂಲ್ ಕಾರ್ನರ್ ಬಳಿಗೆ ತೆರಳಿ ಹಲವರನ್ನು ಒಂದೆಡೆ ಕಲೆಹಾಕಿ ಚರ್ಚೆ ನಡೆಸಿದ. ಅಲ್ಲಿಂದ ಸರಳಾದೇವಿ ಕಾಲೇಜಿನವರೆಗೆ ವಿದ್ಯಾರ್ಥಿನಿಯರೊಂದಿಗೆ ಪಾದಯಾತ್ರೆ ಕೈಗೊಂಡು, ಕಾಲೇಜು ಎದುರು ಬೃಹತ್ ಪ್ರತಿಭಟನೆ ನಡೆಯಿತು. ಹಲವು ತಾಸುಗಳ ಕಾಲ ಸರ್ಕಾರ, ಪ್ರಾಚಾರ್ಯರ ವಿರುದ್ಧ ೋಷಣೆ ಕೂಗಲಾಯಿತು.

ಕೊನೆಗೆ ವಕೀಲರಾದ ಮಹಮ್ಮದ್ ಅಲಿ, ಮಹಮ್ಮದ್ ಯೂಸ್ೂ, ರೋಷನ್ ಬಾಷಾ ಹಾಗೂ ಪೊಲೀಸರು ತಿಳಿವಳಿಕೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು. ಕೋರ್ಟ್ ಆದೇಶ ಪಾಲನೆ ಮಾಡಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ಮನವರಿಕೆ ಮಾಡಿದ ಬಳಿಕ ಹಲವರು ಸ್ಥಳದಿಂದ ಕಾಲ್ಕಿತ್ತರು.