ಜಿಲ್ಲೆ

ಎರಡು ಪಕ್ಷದಲ್ಲಿ ಬಂಡಾಯದ ಜೋರು ಚರ್ಚೆ

ಬಳ್ಳಾರಿ : ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಂಡೂರು ಕ್ಷೇತ್ರದಲ್ಲಿ ರಾಜಕೀಯ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಒಂದಡೆಯಾದರೆ ಬಿಜೆಪಿಯಿಂದ ವಂಚಿತರ ಬಂಡಾಯದ ಚರ್ಚೆ ಜೋರಾಗಿ ನಡೆಯುತ್ತಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದ್ದರಿಂದ ಟಿಕೆಟ್ ವಂಚಿತರು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿ ಬಂಡಾಯ ಏಳುವ ಸಂದೇಶ ಸಾರುತ್ತಿದ್ದಾರೆ. ಕೆಲ ಅಕಾಂಕ್ಷಿಗಳು ಬೆಂಬಲಿಗರ ಜತೆ ಸಭೆ ನಡೆಸಿ ಮುಂದಿನ ತೀರ್ಮಾನ ನಿರ್ಧಾರಿಸುವ ಇಂಗಿತ ವ್ಯಕ್ತಪಡಿಸಿದ್ದು ಬಂಡಾಯ ಏಳಿದರೆ ಪಕ್ಷಕ್ಕೆ ಒಡೆತ ಬೀಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಕಾಂಗ್ರೆಸ್ ಕುಟುಂಬ ರಾಜಕಾರಣ ಬೇಡ ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಸದ್ದ್ು ಜೋರಾಗಿ ಕೇಳುತ್ತಿದೆ. ಸಂಸದ ಈ. ತುಕಾರಾಮ್ ಪತ್ನಿ ಅನ್ನಪೂರ್ಣ ಅವರಿಗೆ ನೀಡಿದರೆ ಸ್ಥಳಿಯ ನಾಯಕರು ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ. ಸ್ಥಳಿಯರ ವಿರೋಧದ ನಡುವೆ ಅನ್ನಪೂರ್ಣ ಟಿಕೆಟ್ ಘೋಷಿಸಿದರೆ ಅನಾನುಕೂಲವಾಗಲಿದೆ ಎಂಬ ಉದ್ದೇಶದಿಂದ ಟಿಕೆಟ್ ಘೋಷಿಸದೆ ಕಾಯ್ದೆ ಇರಿಸಿದೆ. ಒಂದಡೆ ಬಿಜೆಪಿ ಭಾನುವಾರದಿಂದಲೇ ಕ್ಷೇತ್ರವಾರು ಪ್ರಚಾರ ಆರಂಭಿಸಿದೆ. ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಿದರೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ಚಿಂತಿಸುತ್ತಿದೆ.