ಬಳ್ಳಾರಿ: ಜಿಲ್ಲೆಯ ಎರಡು ಸ್ಥಳಿಯ ಸಂಸ್ಥೆಗಳ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು, ಸಿರಗುಪ್ಪ ನಗರಸಭೆ ಕಾಂಗ್ರೆಸ್ ಪಾಲಾದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ ಬಿಜೆಪಿ ಪಾಲಾಗಿದೆ.
ಸಿರಗುಪ್ಪ ನಗರಸಭೆ: ಒಟ್ಟು 31 ವಾರ್ಡ್ಗಳಲ್ಲಿ ಬಿಜೆಪಿ-8, ಕಾಂಗ್ರೆಸ್-16, ಪಕ್ಷೇತರ-01 ಸ್ಥಾನದಲ್ಲಿ ಜಯ ಸಾಧಿಸಿದ್ದಾರೆ.
ಇನ್ನು ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ ಬಿಜೆಪಿ ಪಾಲಾಗಿದ್ದು, ಒಟ್ಟು 20 ವಾರ್ಡ್ಗಳಲ್ಲಿ ಬಿಜೆಪಿ-11, ಕಾಂಗ್ರೆಸ್-9 ಸ್ಥಾನದಲ್ಲಿ ಜಯಶಾಲಿಯಾಗಿದೆ. ಕಳೆದ ಬಾರಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಸಿರುಗುಪ್ಪ ನಗರ ಸಭೆ ಕಾಂಗ್ರೆಸ್ ಗೆದ್ದಿದೆ.