ಜಿಲ್ಲೆ

ನೂತನ ಗ್ರಾಪಂ ಸದಸ್ಯರ ಪಟ್ಟಿ ಪ್ರಕಟ

ಬಳ್ಳಾರಿ : ಜಿಲ್ಲೆಯ ಕಂಪ್ಲಿ, ಸಿರಗುಪ್ಪ ಮತ್ತು ಸಂಡೂರು ತಾಲೂಕುಗಳ ವಿವಿಧ ಗ್ರಾಪಂ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆಸಲಾಗಿದ್ದು, ಹೊಸದಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟಿಸಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ತಿಳಿಸಿದ್ದಾರೆ. ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಪಂ - ಶರಣಮ್ಮ, ದೇವಲಾಪುರ ಗ್ರಾಪಂ- ಕುರಿಬಸಪ್ಪ, ಸಿರಗುಪ್ಪ ತಾಲೂಕಿನ ರಾವಿಹಾಳು ಗ್ರಾಪಂ - ಸುವರ್ಣ, ಸಂಡೂರು ತಾಲೂಕಿನ ಮೆಟ್ರಿಕಿ ಗ್ರಾಪಂ - ಉಮಾದೇವಿ ಸೇರಿ ಎಲ್ಲರೂ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

====