ಬಳ್ಳಾರಿ : ಜಿಲ್ಲೆಯಲ್ಲಿ ತೆರೆಮರೆಯಲ್ಲಿರುವ ಮಹಿಳೆಯರು ಸಬಲೀಕರಣಗೊಳ್ಳಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಈ.ಅನ್ನಪೂರ್ಣ ಹೇಳಿದರು.
ಇಲ್ಲಿನ ಅಲ್ಲಂಭವನದಲ್ಲಿ ಶನಿವಾರ ಆಯೋಜಿಸಿದ್ದ ಡಿಸೈರ್ ವಾರ್ಷಿಕೋತ್ಸವ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಮೇಳದಲ್ಲಿ ಮಹಿಳೆಯರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಆಸಕ್ತಿ ಅನುಸಾರ ಬಟ್ಟೆ, ಅಭರಣ, ಸಿಹಿ ತಿನಿಸು ಹಾಗೂ ಮನೆಯ ಪಿಠೋಪಕರಣಗಳು ಒದಗಿಸುವುದು ಸವಾಲಿನ ಕೆಲಸವಾಗಿದೆ. ಆದರೆ, ಅಂತಹ ಸವಾಲಿನ ಕೆಲಸವನ್ನು ವ್ಯವಸ್ಥಾಪಕಿ ಅಲ್ಲಂ ರಚನಾ ಅವರ ಸಾರಥ್ಯದಲ್ಲಿ ಈ ಎಲ್ಲವೂ ಒಂದೇ ಮೇಳದಲ್ಲಿ ಆಯೋಜಿಸಿದ್ದು ಸಾಧನೆಯ ಎನ್ನಬಹುದು. ಅಲ್ಲದೆ, ಪ್ರತಿಯೊಬ್ಬರ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಆಶಿಸಿದರು.
ನಮ್ಮ ಕಾಲದಲ್ಲಿ ಒಂದು ಸೀರೆ ಅಥವಾ ಅಭರಣ ಖರೀದಿಸಲು ಒಂದು ತಿಂಗಳ ಮುನ್ನವೇ ಯೋಜನೆ ರೂಪಿಸಕೊಳ್ಳಬೇಕಿತ್ತು. ಅಲ್ಲದೆ, ವರ್ಷದಲ್ಲಿ ಬರುವ ವೇತನದ ಬೊನಸ್ ಹಾಗೂ ಕೂಡಿಟ್ಟ ಹಣದ ಮೂಲಕ ಅಭರಣಕೊಳ್ಳುತ್ತಿದ್ದೇವು. ಆದರೆ, ಈಗ ಪ್ರತಿ ತಿಂಗಳಿಗೊಮ್ಮೆ ಮಹಿಳೆಯರ ನಾನಾ ರೀತಿಯ ಬಟ್ಟೆ ಹಾಗೂ ಅಭರಣ ಖರೀದಿಸುತ್ತಿದ್ದಾರೆ. ತಮ್ಮ ವಿವಾಹದಲ್ಲಿ ಅಭರಣ ಹಾಗೂ ಉಡುಗೆಗಳ ಖರೀದಿ ಬಗ್ಗೆ ಮೆಲುಕು ಹಾಕಿದರು.
ಸ್ಪರ್ಧೆಗಳ ಆಯೋಜನೆ : ಇಳಕಲ್ ಸೀರೆ, ಟ್ರೆಂಡ್ ಕುರ್ಚಾ ಸೆಟ್, ಹ್ಯಾಂಡಮೇಡ್ ಟಾಪ್ಸ್, ಡ್ರೆಸ್, ಹ್ಯಾಂಡ್ ಬ್ಯಾಗ್ , ಹಸ್ತಚಾಲಿತ ಮತ್ತು ಟೆಂಪಲ್ ಶೈಲಿಯ ಅಭರಣ, ಗೋಕಾಕ ಆಧುನಿಕ ವಿನ್ಯಾಸದ ಅಭರಣ, ಎಕೋ ಫ್ರೆಂಡ್ಲಿ ಟೋಟ್ಸ್, ಪೋಟ್ಲಿ, ಕ್ಲಚ್ ಬ್ಯಾಗ್‌ಗಳನ್ನು ಹಲವು ಮಹಿಳೆಯರು ಖರೀದಿಸಲು ಆಸಕ್ತಿ ವಹಿಸಿದರು. ಬೆಂಗಳೂರಿನಿಂದ ತಯಾರಿಸಿದ ಚಾಟ್ಸ್, ಹಣ್ಣು ಚಾಟ್ಸ್, ಪಾನಿಪುರಿ, ಫ್ರೆಂಚ್ ಪ್ರೆಸ್, ಮಿಲ್ಲೆಟ್ ಆಹಾರಗಳ ಸವಿರುಚಿ ಸವಿದರು. ಹೂಗುಚ್ಛ ಕಟ್ಟುವ ಸ್ಪರ್ಧೆ, ಅರಿಶಿಣ ಗೌರಮ್ಮ ಹಾಗೂ ರಾಖಿ ತಯಾರಿಕೆ ಮತ್ತು ಇಳಕಲ್ ಸೀರೆ ಫ್ಯಾನ್ಸಿ ಡ್ರೆಸ್ ರ‌್ಯಾಂಪ್ ವಾಕ್ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.