ಜಿಲ್ಲೆ

ಲಂಚ ಸ್ವೀಕರಿಸುವಾಗಲೇ ಬಲೆಗೆ

Ballari

ಬಳ್ಳಾರಿ: ಇಲ್ಲಿನ ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್, ಗುತ್ತಿಗೆದಾರ ಈಶ್ವರಯ್ಯ ಅವರ ಜಿಎಸ್‌ಟಿ ದಂಡದ ಹಣ ರದ್ದುಮಾಡಿ ಪ್ರಕರಣ ಮುಕ್ತಾಯ ಮಾಡಲು 80 ಸಾವಿರ ರೂ. ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದಾಗ ಸಿಬಿಐ(ಎಸಿಬಿ)ಬೆಂಗಳೂರು ಮತ್ತು ಬಳ್ಳಾರಿ ಎಸಿಬಿ ತಂಡಗಳು ಕ್ಷೀಪ್ರ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಮಧುಸೂದನ್‌ರನ್ನು ಖೆಡ್ಡಾಗೆ ಬಿಳಿಸಿವೆ.

ನಗರ ನಿವಾಸಿ ಈಶ್ವರಯ್ಯ ತಂದೆ ಜಿ.ನರಸಿಂಹಯ್ಯ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರಾಗಿದ್ದರು. ಇವರ ಜಿಎಸ್‌ಟಿ ದಂಡದ ಹಣ ರದ್ದು ಮಾಡಿ ಪ್ರಕರಣ ಮುಕ್ತಾಯ ಮಾಡಲು ಈಶ್ವರಯ್ಯ ಅವರಿಗೆ ಕೇಂದ್ರ ತೆರಿಗೆ (ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ 80 ಸಾವಿರ ರೂ. ಬೇಡಿಕೆ ಇಟ್ಟಿದ್ದು, ಈ ಸಂಬಂಧ ಸಿಬಿಐ(ಎಸಿಬಿ) ಬೆಂಗಳೂರು ಅವರಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಿಂದ ವಿಶೇಷ ತಂಡವು ಬಳ್ಳಾರಿಗೆ ಆಗಮಿಸಿ ಮಧುಸೂದನ್ ಅವರು ಲಂಚದ ಹಣ 80 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಟ್ರ್ಯಾಪ್ ಮಾಡಲಾಯಿತು ಎಸಿಬಿ ಪೊಲೀಸ್ ಅಧೀಕ್ಷಕ ತಿಳಿಸಿದ್ದಾರೆ.