ಕೊಳಗಲ್ ಗ್ರಾಮದ ಬಳಿ ಎಚ್‌ಎಲ್ ಕಾಲುವೆ ಒಡೆದು ಹೋಗಿ ನೀರು ಪೋಲಾಗುತ್ತಿರುವುದು. 
ಜಿಲ್ಲೆ

ಕೊಳಗಲ್ ಬಳಿ ಕಾಲುವೆ ಒಡೆದು ನೀರು ಪೋಲು

ಬಳ್ಳಾರಿ: ಕೊಳಗಲ್ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಬಲದಂಡೆಯ ಮುಖ್ಯ ಕಾಲುವೆ ಒಡೆದು ನೀರು ಪೋಲಾಗಿದೆ.

ಕಾಲುವೆಗೆ ಹರಿದ ನೀರಿನ ರಭಸಕ್ಕೆ ಶುಕ್ರವಾರ ತಡರಾತ್ರಿ ಕಾಲುವೆ ಒಡೆದಿದ್ದು, ಅಪಾರ ನೀರು ಪೋಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತುಂಗಭದ್ರಾ ರೈತ ಸಂಘಟನೆ ಜಿಲ್ಲಾಧ್ಯಕ್ಷ ಪುರುಷೋತ್ತಮ ಗೌಡ, ಕಾಲುವೆ ಒಡೆದು ಹೋದ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮಳೆ ಇಲ್ಲದೆ ಬೆಳೆ ಸಂಪೂರ್ಣ ಒಣಗುತ್ತಿದ್ದು, ಹನಿ ನೀರಿಗೂ ರೈತರು ಪರದಾಡುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಎಚ್‌ಎಲ್ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಅಧಿಕಾರಿಗಳು ತುರ್ತಾಗಿ ಕಾಲುವೆ ದುರಸ್ತಿಗೊಳಿಸಬೇಕು. ಇಲ್ಲವೇ ಹೋರಾಟ ಮಾಡಲಾಗುವುದು ಎಂದು ರೈತರು ಆಗ್ರಹಿಸಿದ್ದಾರೆ.