ಬಳ್ಳಾರಿ : ಇಲ್ಲಿನ ರಾಘವ ಕಲಾಮಂದಿರದಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರ ಅಭಿಯಾನ ಹಿನ್ನೆಲೆ ಜ.11 ರಂದು ಸಂಜೆ ಅಂತರಾಷ್ಟ್ರೀಯ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ ಅವರಿಂದ ಜಾಗೃತಿ ಜಾದೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮೆ ಜಿಲ್ಲಾ ಸಂಚಾಲಕ ಡಾ.ಜಿ.ಆರ್.ವಸ್ತ್ರದ ಹೇಳಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಾಗೃತಿ ಜಾದೂ ಕಾರ್ಯಕ್ರಮವನ್ನು ಚೈತನ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ರಾಧಾಕೃಷ್ಣ ಉದ್ಘಾಟಿಸಿಲಿದ್ದಾರೆ. ಪತಂಜಲಿ ಯೋಗ ಸಮಿತಿಯ ಜಿಲ್ಲಾಧ್ಯಕ್ಷ ಇಸ್ವಿ ಪಂಪಾಪತಿ, ಜಿಲ್ಲಾ ಪದವಿ ಪೂರ್ವ ಪ್ರಾಂಶುಪಾಲ ಸಂಘದ ಅಧ್ಯಕ್ಷೆ ಎಂ.ಶ್ರೀಶೈಲ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯ ಸಂಘದ ಜಿಲ್ಲಾಧ್ಯಕ್ಷೆ ಬೋರಮ್ಮ ಕೆಂಬಾವಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವವರು ಎಂದು ತಿಳಿಸಿದರು.
ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಮಾತನಾಡಿ, ಸ್ವಾಮಿ ವಿವೇಕಾನಂದರ 162ನೇ ಜಯಂತಿ ಹಿನ್ನೆಲೆ ನಗರದ ರಾಘವ ಕಲಾಮಂದಿರದಲ್ಲಿ ಜ.12 ರಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ವಿವೇಕತೋರಣ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದು, ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಉದ್ಯಮಿ ಕೆ.ಜಿ.ತಿಮ್ಮಾರೆಡ್ಡಿ , ಖ್ಯಾತ ತಜ್ಞ ವೈದ್ಯ ಡಾ.ಬಿ.ಭೀಮಾ ಧರ್ಮರೆಡ್ಡಿ ಪಾಲ್ಗೊಳ್ಳುವವರು ಎಂದು ತಿಳಿಸಿದರು. ಸಂಚಾಲಕರಾದ ವೆಂಕಟೇಶ ಬಡಿಗೇರ, ಅಡವಿಸ್ವಾಮಿ ಇದ್ದರು.
---