ಜಿಲ್ಲೆ

ಸಿಸಿ ಕ್ಯಾಮರಾ ಅಳವಡಿಕೆ ನೆನೆಗುದಿಗೆ

ಬಳ್ಳಾರಿ ; ರಾಜ್ಯ ಸರ್ಕಾರ ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ನಿಯಂತ್ರಿಸಲು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸುವ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಸಾರ್ವಜನಿಕರ ಹಿತದೃಷ್ಠಿ ಜತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಪ್ರಮುಖ ವೃತ್ತಗಳಲ್ಲಿ ಅತ್ಯಾಧುನಿಕ ಎಐ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದಾಗಿ ಕೆಲ ತಿಂಗಳ ಹಿಂದಯೇ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಈವರೆಗೆ ಕಾರ್ಯಗತಗೊಳಿಸಲು ಮುಂದಾಗಿಲ್ಲ.

ಬಳ್ಳಾರಿ ನಗರವೂ ದಿನೇದಿನೆ ಬೃಹತ್ ನಗರವಾಗಿ ಬೆಳೆಯುತ್ತಿದ್ದು, ಇದರ ಜತೆ ಜನಸಂಖ್ಯೆ ಕೂಡ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಬೈಕ್ ಕಳ್ಳತನ, ಅಪಘಾತ ಹಾಗೂ ಉಗ್ರ ಚಟುವಟಿಕೆಗಳು ಸೇರಿದಂತೆ ರಾತ್ರಿ ವೇಳೆ ಮದ್ಯಪಾನ ಮಾಡಿದ ಯುವಕರು ಬೈಕ್ ಸ್ಟಟಿಂಗ್ ಮಾಡುತ್ತಾರೆ. ತಡರಾತ್ರಿ ಲಾರಿಗಳ ಹಾವಳಿಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರದಲ್ಲಿ ಅನೇಕ ವರ್ಷಗಳ ಹಿಂದೆಯೇ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ಬಹುತೇಕ ಹಾಳಾಗಿದ್ದು, ಪೊಲೀಸ್ ಇಲಾಖೆಗೆ ಅನನುಕೂಲವಾಗಿದೆ. ಇಲ್ಲಿನ ರಾಯಲ್, ಮೋತಿ, ಕನಕದುರ್ಗಮ್ಮ ಸರ್ಕಲ್, ಸುಧಾಕ್ರಾಸ್, ಎಸ್ಪಿ ವೃತ್ತ, ಇಂದಿರಾ ವೃತ್ತ, ಬೆಂಗಳೂರು ರಸ್ತೆ ಸೇರಿದಂತೆ ನಗರದ ಮೂವತ್ತು ಕಡೆಗಳಲ್ಲಿ ನೂತನ ಅತ್ಯಾಧುನಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕಿತ್ತು. ಆದರೆ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಅಪರಾಧ ತಡೆಗೆ ಸಹಾಯಕ : ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಬೈಕ್, ಕಾರು, ಓಡಿಸುವವರು, ಕಳ್ಳತನ, ಪ್ರತಿಭಟನೆ ವೇಳೆ ಕಲ್ಲು ತೂರಾಟ, ಒಂಟಿ ಮಹಿಳೆಯರನ್ನು ಚುಡಾಯಿಸುವುದು. ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾವಹಿಸಲು, ಮಾರುಕಟ್ಟೆ ಜನನಿಬಿಡ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಸೇರಿ ಕಾನೂನು ವಿರೋಧಿ ಚಟುವಟಿಕೆ ನಡೆಸುವವರಿಗೆ ಕಡಿವಾಣ ಹಾಕಲು ಉಪಯೋಗವಾಗುತ್ತದೆ. ಇದರ ಜತೆ ಅಪಘಾತ, ಕಳ್ಳತನ, ದರೋಡೆ, ಕೊಲೆ, ಪುಡಿ ರೌಡಿಗಳ ಹಾವಳಿಯಂತ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆಗೆ ಅನುಕೂಲವಾಗಲಿದ್ದು, ರಾತ್ರಿ ವೇಳೆಯಲ್ಲಿ ನಡೆಯುವ ಅಪರಾಧ ತಡೆಗೆ ಸಾಕಷ್ಟು ನೆರವಾಗಲಿದೆ.

ದುಸ್ಥಿತಿಯಲ್ಲಿ ಸಿಗ್ನಲ್ಸ್ : ಅನೇಕ ದಿನಗಳಿಂದ ಇಲ್ಲಿನ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ಸ್‌ಗಳು ದುಸ್ಥಿತಿಯಲ್ಲಿದ್ದು, ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿರ್ವಹಣೆಗೆ ಹರಸಾಹಸ ಪಡುವಂತೆಯಾಗಿದೆ. ಬಹುತೇಕ ದಿನಗಳಿಂದ ಸಿಗ್ನಲ್ಸ್‌ಗಳು ಕಾರ್ಯ ಸ್ಥಗಿತಗೊಳಿಸಿದ್ದರಿಂದ ವಾಹನಗಳು ಅಡ್ಡಾದಿಡ್ಡಿ ಓಡುವಂತೆಯಾಗಿದೆ. ಇದರಿಂದ ಅಪಘಾತ ಸಂಭವಕ್ಕೆ ಆಹ್ವಾನ ಮಾಡಿಕೊಟ್ಟಂತಾಗಿದೆ. ಕಳೆದ ಕೆಲ ತಿಂಗಳಿಂದ ಇಲ್ಲಿನ ಪ್ರಮುಖ ವೃತ್ತಗಳಾದ ರಾಯಲ್ ವೃತ್ತದಲ್ಲಿ ಕ್ಲಾಕ್ ಟವರ್, ಎಸ್ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಪ್ರತಿಮೆ, ಕೆಇಬಿ ವೃತ್ತದಲ್ಲಿ ಆಶ್ವಾರೂಢ ಬಸವೇಶ್ವರ ಪುತ್ಥಳಿ, ಸುಧಾ ಕ್ರಾಸ್ ಬಳಿ ರೈಲು ಮೇಲಸೇತುವೆ, ಕೌಲಬಜಾರ್ ವಾಚ್ ಟವರ್ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಸಿಸಿ ಕ್ಯಾಮರಾಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಸಿಗ್ನಲ್‌ಗಳು ಇಲ್ಲದೆ ಇರುವುದರಿಂದ ಅಡ್ಡಾದಿಡ್ಡಿಯಾಗಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸಿಸಿ ಟಿವಿ ಅಳವಡಿಸುವುದರಿಂದ ವಾಹನಗಳ ಮೇಲೆ ನಿಗಾವಹಿಸಬಹುದು.

ಬಾಕ್ಸ್ : ಸದ್ಯ ಕಾಮಗಾರಿ ಟೆಂಡರ್ ಹಂತದಲ್ಲಿದ್ದು ನಗರದ 40ಕ್ಕೂ ಅಧಿಕ ಸ್ಥಳಗಳಲ್ಲಿ ಎಐ ಆಧಾರಿತ ನೂರಕ್ಕೂ ಅಧಿಕ ಸಿಸಿ ಕ್ಯಾಮರಾ ಅಳವಡಿಸಿ, ಕಮಾಂಡ್ ಹಾಗೂ ಕಂಟ್ರೂಲ್ ರೂಮ್ ಸ್ಥಾಪಿಸಿ ಮೇಲ್ದರ್ಜೆಗೇರಿಸಲಾಗುವುದು. ಇದರಲ್ಲಿ ಅಟೋಮೆಟಿಕ್ ನಂಬರ್ ಪ್ಲೇಟ್ ರಿಡೀಂಗ್ (ಎಎನ್‌ಪಿಆರ್), ಬುಲೆಟ್ ಹಾಗೂ ಪಿಟಿಝಡ್ ನ ಎಐ ಆಧಾರಿತ ಕ್ಯಾಮರಾ ಇರಲಿವೆ.

ಕೋಟ್..ಪಾಲಿಕೆ ವತಿಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಹಂತ 2 ರಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸಿಸಿ ಟಿವಿ ಅಳವಡಿಸಲಾಗವುದು. ಈಗಾಗಲೇ ಟೆಂಡರ್ ಹಂತದಲ್ಲಿದ್ದು ಇನ್ನೂ ಎರಡ್ಮೂರು ತಿಂಗಳಲ್ಲಿ ಕಾರ್ಯ ಆರಂಭವಾಗಲಿದೆ.

- ಮಲ್ಲನಗೌಡ, ಪ್ರಭಾರ ಆಯಕ್ತ, (ಅಭಿವೃದ್ಧಿ ), ಮಹಾನಗರ ಪಾಲಿಕೆ, ಬಳ್ಳಾರಿ.