ಜಿಲ್ಲೆ

ಅಕ್ರಮ ತಂಬಾಕು ವಶ, ಇಬ್ಬರ ಬಂಧನ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಇಲ್ಲಿನ ಗುಗ್ಗರಹಟ್ಟಿಯ ಮನೆಯೊಂದರಲ್ಲಿ ದಾಖಲೆ ಇಲ್ಲದೆ ಸಂಗ್ರಹಿಸಿದ್ದ ಎಂಟು ‌ಟನ್ ತಂಬಾಕು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.

ಆಂದ್ರಪ್ರದೇಶದ ಹನುಮಾನ್, ಕಾಶಿರಾವ್ ಬಂಧಿತರು.

ನೆರೆಯ ಆಂಧ್ರದ ಆಲೂರು ಮಂಡಲದಿಂದ ಗುಗ್ಗರಹಟ್ಟಿಯ ಮನೆಯಲ್ಲಿ ಸಂಗ್ರಹಿಸಲಾಗಿದೆ. ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ ವೇಳೆ ಅಕ್ರಮ ತಂಬಾಕು ಎಂಬುದಾಗಿ ತಿಳಿದಿದೆ‌. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.