ಜಿಲ್ಲೆ

ಪಾರ್ಶ್ವವಾಯು ನಿರ್ಲಕ್ಷ ವಹಿಸಿದರಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯ ‌ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಥಳೀಯ ಹಾಗೂ ‌ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರನ್ನು ಬೆಂಬಲಿಸಿ ಎಂದು‌ ಮಾಜಿ ಸಂಸದ ಕೆ. ಸಿ. ಕೊಂಡಯ್ಯ ಮನವಿ ಮಾಡಿಕೊಂಡರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 2004 ರಿಂದ 08 ರವರೆಗೆ ಜಿಲ್ಲೆಯಲ್ಲಿ ನಡೆದಿದ್ದ ಅವ್ಯಾಹತ ಹಾಗೂ ಅಕ್ರಮ ಗಣಿಗಾರಿಕೆಗೆ ಕಾರಣವಾಗಿದ್ದವರು ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ‌ಅಭ್ಯರ್ಥಿ ಪ್ರಚಾರ ನಡೆಸುವರು ಅಭಿವೃದ್ಧಿಗಾಗಿ ಅಲ್ಲ, ಕ್ಷೇತ್ರದಲ್ಲಿರುವ ಕಬ್ಬಿಣ ‌ಮತ್ತು ಮ್ಯಾಂಗನೀಸ್ ಗಣಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಕೆಲ ದಶಕಗಳಿಂದ ಕ್ಷೇತ್ರದಲ್ಲಿ ಗಣಿಗಾರಿಕೆಯ ದೌರ್ಜನ್ಯಗಳು ಮತ್ತು ಗಲಾಟೆಗಳು ಮತ್ತು ‌ಅಕ್ರಮ ಪುನಾರವರ್ತನೆ‌ ಆಗದಂತೆ‌ ಕ್ಷೇತ್ರದ ‌ಮತದಾರರು ಎಚ್ವೇತ್ತುಕೊಳ್ಳಬೇಕು ಎಂದರು. ಅಲ್ಲದೆ, ಯಾವುದೆ ಕಾರಣಕ್ಕೂ ಹೊರಗಿನ ಅಭ್ಯರ್ಥಿಗಳನ್ನು ಬೆಂಬಲಿಸಬೇಡಿ ಎಂದು ಹೇಳಿದರು. ಸಂಸದ ಈ. ತುಕಾರಾಮ್ ನಾಲ್ಕು ಅವಧಿಯಲ್ಲಿ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ. ಸಂಸದರು ಹಾಗೂ ಶಾಸಕರು ಒಂದೇ ಪಕ್ಷವಾದಲ್ಲಿ ತಾಲೂಕು ಅಭಿವೃದ್ಧಿಗೆ ಹೆಚ್ಚಿನ ವಿಶೇಷ ಅನುದಾನ ತರಲು ಅನುಕೂಲವಾಗುತ್ತದೆ ಎಂದರು.

ಪ್ರಮುಖರಾದ ಮುಖಂಡರಾದ ವೆಂಕಟೇಶ್ ಹೆಗಡೆ, ರಾಮಪ್ರಸಾದ ಮನೋಹರ್, ಸಿ. ರಾಮರಾಜು, ಪಾರ್ಥ ಸಾರಥಿ, ವೆಂಕಟರಮಣ ರೆಡ್ಡಿ ಇದ್ದರು.