ಬಳ್ಳಾರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ವತಿಯಿಂದ ಫೆ.20 ರಿಂದ 22 ರ ವರೆಗೆ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲೂ ಜಿಂದಾಲ್‌ನ 10 ಸ್ಥಳಗಳಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‌ಒ ರಮೇಶಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳ: ಜಿಂದಾಲ್‌ನ ಓಪಿಜೆ ಸೆಂಟರ್‌ನ ತಮನ್ನಾ ಶಾಲೆ, ವಿದ್ಯಾನಗರದ ಆರೋಗ್ಯ ಕೇಂದ್ರ ಮತ್ತು ಲಿಟಲ್ ಎಲ್ಲೆ, ಹೆಚ್‌ಎಸ್‌ಟಿ ಕಾಂಪ್ಲೆಕ್ಸ್, ಸಿಆರ್‌ಎಂ-1, ಲಾಜಿಸ್ಟಿಕ್ ಪ್ಲಾಂಟ್, ಎಸ್‌ಎಂಎಸ್, ಎಚ್‌ಆರ್‌ಡಿ ಪ್ಲಾಂಟ್, ಜೆಎಸ್‌ಎಂಎಸ್‌ಎಚ್‌ನ ಸ್ಟೆಪ್‌ಡೌನ್ ಐಸಿಯು ಮತ್ತು ಜೆಎಸ್‌ಡಬ್ಲೂೃ ಎನರ್ಜಿ ಸಭಾಂಗಣ.
--------------