ನಾಗೇಂದ್ರ. 
ಜಿಲ್ಲೆ

ಆರೋಗ್ಯ ಮಂತ್ರಿ ಅವಿವೇಕಿ

ಬಳ್ಳಾರಿ: ಅವಿವೇಕಿಗಳಾದ ವಿಮ್ಸ್ ನಿರ್ದೇಶಕ ಮತ್ತು ಮಂತ್ರಿ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ ಅಂತ ಬಹಳ ದೊಡ್ಡದಾಗಿ ಬಿಂಬಿಸಿಕೊಂಡು ಓಡಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಇವತ್ತು ಬಡ ಜನ ಸಾಯುತ್ತಿದ್ದಾರೆ. ನಿಮ್ಮ ಸ್ವಾರ್ಥಕ್ಕಾಗಿ ಹಾಗೂ ಇಲ್ಲಿ ಹಣ ಲೂಟಿ ಮಾಡಲು ಯಾರನ್ನೋ ಅಧಿಕಾರಿಯನ್ನಾಗಿ ನೇಮಕ ಮಾಡ್ತಿರಾ. ವಿಮ್ಸ್‌ನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಿದ್ದಾರೆ. ಬಳ್ಳಾರಿಯನ್ನ ಬಿಜೆಪಿಯವರು ಧ್ವಂಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.