ಜಿಲ್ಲೆ

ಸರ್ಕಾರಿ ನೌಕರರ ಸಂಘಕ್ಕೆ ಸಮಾನ ಮನಸ್ಕರ ತಂಡಕ್ಕೆ ಗೆಲುವು

ಬಳ್ಳಾರಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸಮಾನ ಮನಸ್ಕರ ತಂಡದ ಅಭ್ಯರ್ಥಿಗಳು ಬುಧವಾರ ಗೆಲುವು ಸಾಧಿಸಿದ್ದಾರೆ.

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕ ಜಿಲ್ಲಾಧ್ಯಕ್ಷರಾಗಿ ಎಂ.ಎ. ಆಸೀಫ್, ಆರೋಗ್ಯ ಇಲಾಖೆಯ ಶುಶ್ರೂಷಾಕಾಧಿಕಾರಿ ಖಜಾಂಚಿಯಾಗಿ ಹನುಮಂತರಾಯ ಹಾಗೂ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ರಾಜ್ಯ ಪರಿಷತ್ ಸದಸ್ಯರಾಗಿ ಎಂ. ಸುರೇಶಕುಮಾರ ಆಯ್ಕೆಯಾಗಿದ್ದರೆ. ಒಟ್ಟಾರೆ 68 ಸರ್ಕಾರಿ ನೌಕರರು ಮತದಾನದ ಹಕ್ಕು ಚಲಾಯಿಸಿದರು.

ನಗರದ ಸಂಘದ ಕಚೇರಿಯಲ್ಲಿ ಮತದಾನ ನಡೆಯಿತು.

ಎಂ.ಎ. ಆಸೀಫ್ ( 43), ಹನುಮಂತರಾಯ ( 42) ಹಾಗೂ ಎಂ.‌ಸುರೇಶಕುಮಾರ ( 41) ಮತ‌ಗಳನ್ನು ಪಡೆದರು. ಸಮೀಪದ ಸ್ಪರ್ಧಿ ಬಿಸಿಎಂ ಇಲಾಖೆಯ ಅಧಿಕಾರಿ

ಆರ್.ಎಚ್.ಲೋಕೇಶ್ ತಂಡ ಸಮಾನ ಮನಸ್ಕರ ತಂಡದ ವಿರುದ್ಧ ಪರಭಾವಗೊಂಡಿತು