ಜಿಲ್ಲೆ

ಸರ್ಕಾರ ಮನೆ ಭತ್ಯೆ ಹೆಚ್ಚಿಸಲಿ

ಬಳ್ಳಾರಿ : ಮನೆ ಭತ್ಯೆ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಎಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸರ್ಕಾರಿ ನೌಕರರಿಗೆ 2011ರ ಜನಗಣತಿಯ ಆಧಾರದ ಮೇಲೆಯೇ ಮನೆ ಭತ್ಯೆ ಶೇ.7.5 ರಷ್ಟು ನೀಡಲಾಗುತ್ತಿದೆ. ಬದಲಾಗಿ ಶೇ.15 ರಷ್ಟು ಹೆಚ್ಚಿಸಬೇಕು. ನಗರದಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಕುಡಿವ ನೀರು, ಆಸನ, ಸಾರಿಗೆ ಕ್ಯಾಂಟಿನ್ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು. ಎಲ್ಲ ಇಲಾಖೆಗಳಲ್ಲಿ ನನೆಗುದಿಗೆ ಬಿದ್ದಿರುವ ಸಿ ಮತ್ತು ಆರ್ ಪರಿಷ್ಕರಿಸಿ ಹಾಗೂ ಜೇಷ್ಠತಾ ಪಟ್ಟಿ ತಯಾರಿಸಿ ಮುಂಬಡ್ತಿ ನೀಡಬೇಕು. ಎನ್‌ಪಿಎಸ್, ಯುಪಿಎಸ್, ಪಿಎಫ್‌ಆರ್‌ಡಿಎ ಕಾಯ್ದೆಗಳನ್ನು ರದ್ದುಗೊಳಿಸಿ ನಿಶ್ಚಿತ ಹಳೆಯ ಪಿಂಚಣಿಯನ್ನು ಮರು ಸ್ಥಾಪಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿ ತುರ್ತಾಗಿ ಭರ್ತಿ ಮಾಡಬೇಕು. ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.