ಜಿಲ್ಲೆ

ದೇವಿಗೆ ದುರ್ಗಾದೇವಿ ಅಲಂಕಾರ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಿನ್ನೆಲೆಯಲ್ಲಿ ದೇವಿಯ ಮೂರ್ತಿಗೆ ಮಂಗಳವಾರ ದುರ್ಗಾದೇವಿ ಆಲಂಕಾರ ಮಾಡಲಾಗಿತ್ತು. ದೇವಿಗೆ ಅಭಿಷೇಕ, ಎಲೆಪೂಜೆ ಹಾಗೂ ಶ್ರೀಚಕ್ರ ಸಹಿತ ಕುಂಕುಮ ಆರ್ಚನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಲಾಯಿತು. ಸಿ.ಆದಿಶೇಷ ಶರ್ಮ, ನಾಗರಾಜ ಸ್ವಾಮಿ ಪುರೋಹಿತರು ಹಾಗೂ ಅರ್ಚಕರ ತಂಡದಿಂದ ಚಂಡಿಯಾಗ ಮತ್ತು ಮಹಾಪೂರ್ಣಹುತಿ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.