ಜಿಲ್ಲೆ

ಅಂಕಪಟ್ಟಿ ವಿಳಂಬದಿಂದ ಭವಿಷ್ಯಕ್ಕೆ ಕುತ್ತು

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ತಾಂತ್ರಿಕ ಕಾರಣದ ನೆಪವೊಡ್ಡಿ ವಿಎಸ್‌ಕೆ ವಿವಿಯು ಪದವಿ ಅಂಕಪಟ್ಟಿಗಳನ್ನು ನೀಡದ ಕಾರಣ ಉನ್ನತ ವ್ಯಾಸಂಗ ಕನಸು ಹೊಂದಿದ್ದ ಸಾವಿರಾರು ವಿದ್ಯಾರ್ಥಿಗಳು ಅತಂಕಕ್ಕೆ ಒಳಗಾಗಿದ್ದಾರೆ.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿಯ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಿಂದ ಸದ್ಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ. 2021ರಲ್ಲಿ ಪ್ರವೇಶ ಪಡೆದ ಬಿ.ಕಾಂ, ಬಿಎಸ್ಸಿ , ಬಿಬಿಎ ಒಂದರಿಂದ ಮೂರನೇ ಅಂಕಪಟ್ಟಿಗಳ ಮಾತ್ರ ನೀಡಿದೆ. ಬಿಎ ಯ ಆರು ಸೆಮ್ ಹಾಗೂ ಬಿ.ಕಾಂ, ಬಿಎಸ್ಸಿ , ಬಿಬಿಎ ಪದವಿಯ ಐದು ಹಾಗೂ ಆರನೇ ಸೆಮ್‌ನ ಅಂಕಪಟ್ಟಿಗಳು ಈವರೆಗೂ ವಿವಿಯಿಂದ ಒಂದು ಸೆಮ್ ಅಂಕಪಟ್ಟಿ ಯೂ ವಿವಿ ನೀಡಿಲ್ಲ. ಕೇವಲ ಪ್ರತಿ ಸೆಮ್ ಫಲಿತಾಂಶ ಬಿಡುಗಡೆಗೊಳಿಸಿದ ವೇಳೆ ಅಂತರ್ಜಾಲ (ಇಂಟರನೆಟ್)ಮೂಲಕ ಸಂಗ್ರಹಿಸಿದ ಅಂಕಪಟ್ಟಿಗಳೆ ವಿದ್ಯಾರ್ಥಿಗಳ ಬಳಿಯಿವೆ. ಇದರಿಂದ ಉನ್ನತ ವ್ಯಾಸಂಗಕ್ಕಾಗಿ ರಾಜ್ಯದ ವಿವಿಧ ವಿವಿಗಳಲ್ಲಿ ಪ್ರವೇಶ ಪಡೆಯಲು ವಿವಿಯಿಂದ ಪಡೆದ ಅಂಕಪಟ್ಟಿಗಳು ಸಲ್ಲಿಸಬೇಕು. ಇಲ್ಲದಿದ್ದರೆ, ಅಂತರರ್ಜಾಲದ ಅಂಕಪಟ್ಟಿಗಳಿಗೆ ವಿವಿಯ ಸಂಬಂಧಪಟ್ಟ ಅಧಿಕಾರಿಗಳ ಸಹಿ ಪಡೆದು ಸಲ್ಲಿಸಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು, ಸಿರಗುಪ್ಪ, ಸಂಡೂರು ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಿಂದ ಸಾವಿರಾರು ರೂ. ವ್ಯಯಿಸಿ ಸಹಿಗಾಗಿ ವಿವಿಗೆ ಅಲೆದಾಡುವ ಸ್ಥಿತಿಯಾಗಿದೆ. ಈಗಾಗಲೇ ಎರಡ್ಮೂರು ಬಾರಿ ಅಂಕಪಟ್ಟಿಗಾಗಿ ವಿವಿ ಆವರಣದಲ್ಲಿ ಪ್ರತಿಭಟಿಸಿ ಕುಲಪತಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಎನ್‌ಇಪಿಯಲ್ಲಿ ಪ್ರತಿಯೊಂದು ವಿದ್ಯಾರ್ಥಿಗಳ ದಾಖಲಾತಿಯ ವಿವರವನ್ನು ಯುಯುಸಿಎಂಎಸ್ ಸಲ್ಲಿಸಲಾಗಿತ್ತು. ಆದರೆ, ಸದ್ಯ ಯುಯುಸಿಎಂಎಸ್‌ಗೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಆದ್ದರಿಂದ, ಅಂಕಪಟ್ಟಿ ವಿತರಿಸಲು ತಡವಾಗಿದೆ ಎಂದು ವಿವಿಯ ಅಪ್ತರೊಬ್ಬರು ತಿಳಿಸಿದರು. ಎನ್‌ಇಪಿ ಜಾರಿಗೂ ಮುನ್ನ ಎಲ್ಲ ವಿವಿಗಳಲ್ಲಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಯಲ್ಲಿತ್ತು. ಪ್ರತಿ ಸೆಮ್ ಫಲಿತಾಂಶ ಪ್ರಕಟಗೊಂಡ ಕೆಲವೇ ದಿನಗಳಲ್ಲೇ ವಿವಿಯಿಂದ ಅಂಕಪಟ್ಟಿಗಳನ್ನು ನೀಡಲಾಗುತ್ತಿತ್ತು. ಆರನೇ ಸೆಮ್ ಅಂಕಪಟ್ಟಿ ಮಾತ್ರ ಉನ್ನತ ವ್ಯಾಸಂಗದ ಪ್ರವೇಶ ಕೆಲ ತಿಂಗಳಲ್ಲಿ ವಿತರಿಸಲಾಗುತ್ತಿತ್ತು. ಸದ್ಯ, ಉನ್ನತ ವ್ಯಾಸಂಗದ ಕನಸು ಕಂಡಿದ್ದ ವಿದ್ಯಾರ್ಥಿಗಳ ಭವಿಷ್ಯದ ವಿವಿ ಚೆಲ್ಲಾಟವಾಡುತ್ತಿದೆ.

ಫಲಿತಾಂಶ ಪ್ರಕಟವಾಗದ ಐದನೇ ಸೆಮ್ : ವಿಎಸ್‌ಕೆ ವಿವಿಯಲ್ಲಿ ಕಳೆದ ಕೆಲ ದಿನಗಳ ಹಿಂದಯೇ ಪದವಿಯ ಎರಡು, ಮೂರು ಹಾಗೂ ಆರನೇ ಸೆಮ್ ಪರೀಕ್ಷೆ ನಡೆದಿದ್ದು ಕೆಲ ಕೊರ್ಸ್‌ಗಳ ಫಲಿತಾಂಶವು ಪ್ರಕಟಗೊಂಡಿದೆ. ಆದರೆ, ಕೆಲವೊಂದು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಸೊನ್ನೆ, ಫೇಲ್ ಎಂಬುದಾಗಿ ನಮೂದಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ಕಾಲೇಜುಗಳ ಪ್ರಾಂಶುಪಾಲರ ಬಳಿ ಮನವಿ ಮಾಡಿದ್ದಾರೆ. ಆದರೆ, ಈ ಅಂಕಪಟ್ಟಿಯಲ್ಲಿ ತಪ್ಪಾಗಿ ಪ್ರಕಟವಾಗಿರುವುದು ವಿವಿಯಿಂದ ಅಲ್ಲಿಯೇ ಹೋಗಿ ಸರಿಪಡಿಸಿಕೊಳ್ಳಿ ಎಂದು ಕಾಲೇಜು ಪ್ರಾಂಶುಪಾಲರು ಉತ್ತರ ನೀಡಿದ್ದಾರೆ. ತಾಲೂಕು ಕೇಂದ್ರಗಳಿಂದ ವಿವಿಗೆ ಎರಡ್ಮೂರು ಬಾರಿ ಪರೀಕ್ಷಾ ವಿಭಾಗಕ್ಕೆ ಭೇಟಿ ನೀಡಿದರೂ ಕೆಲವೊಂದು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿಲ್ಲ. ಅಲ್ಲದೆ, ಕೆಲ ದಿನಗಳ ಹಿಂದಯೇ ಪದವಿಯ ಆರನೇ ಸೆಮ್ ಫಲಿತಾಂಶ ಪ್ರಕಟವಾಗಿದೆ. ಆದರೆ, ಮೂರು ತಿಂಗಳ ಹಿಂದಯೇ ಬರೆದಿರುವ ಐದನೇ ಸೆಮ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿಲ್ಲ. ಉನ್ನತ ವ್ಯಾಸಂಗ ಪ್ರವೇಶ ಪಡೆಯಲು ಆರು ಸೆಮ್‌ಗಳ ಅಂಕಪಟ್ಟಿ ಸಲ್ಲಿಸಬೇಕು. ಐದನೇ ಸೆಮ್ ಫಲಿತಾಂಶ ಪ್ರಕಟವಾಗದೆ ಇರುವುದರಿಂದ ಈ ಪ್ರವೇಶಾತಿ ಪಡೆಯುವುದು ಕಷ್ಟವಾಗಿದೆ ಎಂದು ಹೊಸಪೇಟೆಯ ವಿಎನ್‌ಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ತಿಳಿಸಿದರು.

ಕೋಟ್... ವಿವಿ ವ್ಯಾಪ್ತಿಯ ಬಿಎ ಪದವಿ ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್ ತಾಂತ್ರಿಕ ಕಾರಣದಿಂದ ಅಂಕಪಟ್ಟಿಗಳು ಡೌನ್‌ಲೋಡ್ ಆಗುತ್ತಿಲ್ಲ. ಬೆಂಗಳೂರಿನವರಿಗೆ ಲಿಸ್ಟ್ ನೀಡಲಾಗಿದ್ದು ಕೆಲ ದಿನಗಳಲ್ಲಿ ಅಂಕಪಟ್ಟಿ ವಿತರಿಸಲಾಗುವುದು. ಕೆಲವೊಂದು ಅಂಕಪಟ್ಟಿಗಳಲ್ಲಿ ಲೋಪವಿದ್ದರೆ ಸರಿಪಡಿಸಲಾಗುವುದು.

- ರಮೇಶ್ ಓಲೇಕಾರ್, ಮೌಲ್ಯಮಾಪನ ಕುಲಸಚಿವ, ವಿಎಸ್‌ಕೆ ವಿವಿ, ಬಳ್ಳಾರಿ.

ಕೋಟ್... ಈಗಾಗಲೆ ಅಂಕಪಟ್ಟಿಗಳು ನೀಡುವಂತೆ ವಿವಿಯಲ್ಲಿ ಪ್ರತಿಭಟಿಸಿದರೂ ಕೂಡ ಪ್ರಯೋಜನವಾಗಿಲ್ಲ. ಅಂಕಪಟ್ಟಿ ವಿಳಂಬದಿಂದ ಉನ್ನತ ವ್ಯಾಸಂಗದ ಕನಸು ಕಮರಿದೆ.

- ವಿದ್ಯಾರ್ಥಿ, ಹೆಸರು ಹೇಳಲೈಚ್ಚಿಸದ ವಿದ್ಯಾರ್ಥಿ, ವಿಜಯನಗರ.