ಜಿಲ್ಲೆ

ಫೋಕ್ಸೋ ಆರೋಪಿ ಬಂಧನ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಪಂಚನಾಮೆ ವೇಳೆ ಪೇದೆಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ಗುರುವಾರ ನಡೆದಿದೆ.

ವಿಜಯನಗರ ಜಿಲ್ಲೆಯ ಹಳ್ಳೇಬೀಡು ನಿವಾಸಿ ಮಂಜುನಾಥ (26) ಬಂಧಿತ. ಇತ್ತೀಚೆಗೆ ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ, ಆರೋಪಿಯನ್ನು ಬುಧವಾರ ಕೊಪ್ಪಳದ ಹುಲಗಿಯಲ್ಲಿ ಬಂಧಿಸಿ ನಗರಕ್ಕೆ ಕರೆ ತರಲಾಗಿತ್ತು. ಗುರುವಾರ ಮುಂಜಾನೆ ಆತನನ್ನು ಪಂಚನಾಮೆ ಘಟನ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಆರೋಪಿ ಪೇದೆ ರಘುಪತಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಆ ಸಂದರ್ಭದಲ್ಲಿ ಠಾಣಾ ಪಿಎಸ್‌ಐ ಧಾಕೇಶ್ ಮೊಣ ಕಾಲಿಗೆ ಗುಂಡು ಹಾರಿಸಿ ಹಿಡಿಯಬೇಕಾಯಿತು ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದ್ದಾರೆ. ಸದ್ಯ ಆರೋಪಿಗೆ ಚಿಕಿತ್ಸೆಗೆ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

====