ಜಿಲ್ಲೆ

ವಿವಿಧೆಡೆ ದಾಳಿ ನಾಲ್ವರು ಬಾಲ ಕಾರ್ಮಿಕರ ರಕ್ಷಣೆ

ಬಳ್ಳಾರಿ : ನಗರದ ಸುಧಾಕ್ರಾಸ್, ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಐಸ್‌ಕ್ರೀಮ್ ಪಾರ್ಲರ್, ಮಟನ್ ಶಾಪ್ ಸೇರಿದಂತೆ ವಿವಿಧಡೆ ಕಾರ್ಮಿಕ ಇಲಾಖೆಯಿಂದ ದಾಳಿ ನಡೆಸಿ ನಾಲ್ವರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಬಾಲ ಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಎ.ಮೌನೇಶ್ ತಿಳಿಸಿದ್ದಾರೆ.

ತಾಲೂಕು ತಹಶೀಲ್ದಾರ ಮಂಜುನಾಥ ನೇತೃತ್ವದ ತಾಲೂಕು ಟಾಸ್ಕ್ ಫೋರ್ಸಸ್ ಸಮಿತಿಯ ಅಧಿಕಾರಿಗಳ ತಂಡದೊಂದಿಗೆ ಸಭೆ ನಡೆಸಿ, ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಸಂಬಂಧಿಸಿ ಶಾಲೆಗಳಲ್ಲಿ ಅವರ ವಯಸ್ಸಿನ ದಾಖಲೆ ಪಡೆದ ನಂತರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.