ಜಿಲ್ಲೆ

ಐದನೇ ಬಾರಿಗೆ ಸಂಡೂರು ಕೈ ವಶ

ಬಳ್ಳಾರಿ : ಮೂರು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಠಿಕಾಣಿ ಹೂಡುವ ಮೂಲಕ ಸಂಡೂರಿನ ಎಸ್ಸಿ-ಎಸ್ಟಿ ಮತಗಳನ್ನು ಸೆಳೆದಿದ್ದು, ಡಿಸಿಎಂ ಆದಿಯಾಗಿ ಸಚಿವರು ತಳಮಟ್ಟದಲ್ಲಿ ಪ್ರಚಾರ ನಡೆಸಿದ್ದು, ತವರಿನಲ್ಲಿ ಹಿಡಿತ ಕಳೆದುಕೊಳ್ಳದ ಸಂತೋಷ ಲಾಡ್ ನಿರಂತರ ಪ್ರಚಾರವೇ ಅಭ್ಯರ್ಥಿ ಅನ್ನಪೂರ್ಣ ಗೆಲುವಿಗೆ ಕಾರಣವಾದವು. ಈ ಮೂಲಕ ಸತತ ಐದನೇ ಬಾರಿಗೆ ಸಂಡೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದು ಸಾಬೀತಾಗಿದೆ.

ಬಿಜೆಪಿ ಗೆಲ್ಲಿಸಿ ಇತಿಹಾಸ ಸೃಷ್ಟಿಸಲು ಮುಂದಾಗಿದ್ದ ಜನಾರ್ದನರೆಡ್ಡಿಗೆ ಸಂಕಲ್ಪಕ್ಕೆ ಮತದಾರರು ಅವಕಾಶ ನೀಡಿಲ್ಲ. ಬಿಜೆಪಿ ಗೆದ್ದರೆ ಗಣಿ ಮೇಲೆ ರೆಡ್ಡಿ ಕಣ್ಣು ಬೀಳಬಹುದೆಂಬ ಆತಂಕದಿಂದ ಗಣಿಮಾಲೀಕರು ಬಿಜೆಪಿಯ ಬಂಗಾರು ಹನುಮಂತುಗೆ ಬೆಂಬಲಿಸಲಿಲ್ಲ. ಬಿಎಸ್‌ವೈ-ಬಿವೈವಿ ಬಂದರೂ ಲಿಂಗಾಯತ, ಪ್ರಬಲ ಜಾತಿಗಳನ್ನು ಓಲೈಸುವಲ್ಲಿ ವಿಫಲರಾದರು. ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸಿದರೂ ಮತಗಳು ಬರಲಿಲ್ಲ.

ಎಸ್ಟಿ, ಎಸ್ಟಿ, ಕುರುಬ, ಮುಸ್ಲಿಂ ಮತಗಳೇ ನಿರ್ಣಯಕವಾಗಿದ್ದು, ಅವರನ್ನು ಮನವೊಲಿಸುವಲ್ಲಿ ಸಿದ್ದರಾಮಯ್ಯ ತಂತ್ರ ಯಶಸ್ವಿಯಾಗಿದೆ. ಸತತ ಗೆದ್ದಿರುವ ಈ.ತುಕಾರಾಮ್ ಅವರು ಮತದಾರರಿಗೆ ಕೈ ಸಿಗುವ ವ್ಯಕ್ತಿ ಮತ್ತು ತವರಿನಲ್ಲಿ ಹಿಡಿತ ಹೊಂದಿರುವ ಸಂತೋಷ ಲಾಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಚ್ಚರಿಯೆಂದರೆ ಬಿಜೆಪಿ ಮತಗಳಿಕೆ ಪ್ರತಿ ಚುನಾವಣೆಯಲ್ಲಿ ಹೆಚ್ಚುತ್ತಾ ಬಂದಿರುವುದು ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ.

== ತೊಡೆ ತಟ್ಟಿದ ಬಂಗಾರು ಹನುಮಂತು ==

ಬಳ್ಳಾರಿಯಲ್ಲಿ ಮತ ಎಣಿಕೆ ವೇಳೆ ಕಾಂಗ್ರೆಸ್ ಗೆಲುವು ಖಚಿತವಾಗುತ್ತಿದ್ದಂತೆ ಎಣಿಕೆ ಕೇಂದ್ರದ ಹೊರತೆ ಕಾರ್ಯಕರ್ತರು ಜೋರು ಕೇಕೆ ಹಾಕಿದರು. ಸೋಲು ಗೊತ್ತಾಗುತ್ತಿದ್ದಂತೆ ಇದೇ ಸಮಯಕ್ಕೆ ಹೊರ ಬಿಜೆಪಿ ಬಂಗಾರು ಹನುಮಂತು ಅವರು ಕಾರ್ಯಕರ್ತರ ಕೇಕೆಗೆ ಪ್ರತಿರೋಧವಾಗಿ ತೊಡೆ ತಟ್ಟಿದರು.

== ಕೋಟ್ ==

ಅಧರ್ಮ ಗೆಲುವು ಸಾಧಿಸಿದೆ. ಬಿಜೆಪಿ ನಾಯಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸೋಲಿನ ಹೊಣೆ ನಾನೇ ಹೊರುವೆ. ಮುಂದಿನ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ.

ಬಂಗಾರು ಹನುಮಂತು

ಪರಾಭವಗೊಂಡ ಬಿಜೆಪಿ ಅಭ್ಯರ್ಥಿ

== ಕೋಟ್ ==

ಮತದಾರರ ನಿರೀಕ್ಷೆಯಂತೆ ಕಾಮಗಾರಿಗಳನ್ನು ಪೂರ್ಣಗೊಳಿಸುವೆ. ಕಳೆದ ಬಾರಿಗಿಂತ ಈ ಬಾರಿ ಶೇ.4 ಮತ ಪ್ರಮಾಣ ಕಾಂಗ್ರೆಸ್‌ಗೆ ಹೆಚ್ಚಿದೆ.

ಈ.ಅನ್ನಪೂರ್ಣ

ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ

== ಮತಗಳ ವಿವರ ==

ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಪಡೆದ ಮತಗಳು-93616

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪಡೆದ ಮತಗಳು-83967

ಮತಗಳ ಅಂತರ- 9649

ಜಿವಿಟಿ = ಅನ್ನಪೂರ್ಣ

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಈ.ಅನ್ನಪೂರ್ಣ ಅವರು ಬಳ್ಳಾರಿಯಲ್ಲಿ ಪತಿ, ಸಂಸದ ಈ.ತುಕಾರಾಮ್ ಮತ್ತು ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು.