ಜಿಲ್ಲೆ

ಕಾರ್ಯಾಚರಣೆ ವಿಸ್ತರಣೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಆಂಧ್ರಪ್ರದೇಶದ ಆದೋನಿ ಮೂಲಕ ಕಾರ್ಯಾಚರಣೆಯಾಗುವ ಕರಾರಸಾ ನಿಗಮದ ಸಾರಿಗೆಗಳ ಕಾರ್ಯಾಚರಣೆಯನ್ನು ಆ.31 ರಿಂದ ಆದೋನಿ ಎಪಿಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ನಿರ್ಮಲ್ ಟಾಕೀಸ್ ಹತ್ತಿರ, ಸರ್ಕಾರಿ ಜನರಲ್ ಆಸ್ಪತ್ರೆ ಹತ್ತಿರ ಹತ್ತಲು, ಇಳಿಯಲು ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆಗಳನ್ನು ಕಲ್ಪಿಸಲಾಗಿದೆ.

===