ಜಿಲ್ಲೆ

ಎರ‌್ರಿತಾತನವರ ವಾರ್ಷಿಕ ರಥೋತ್ಸವ ನಿಷೇಧ

ಬಳ್ಳಾರಿ : ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಏ.04 ರಂದು ನಡೆಯುವ ಶ್ರೀಸದ್ಗುರು ಎರ‌್ರಿತಾತನವರ ವಾರ್ಷಿಕ ಜಾತ್ರೆ ಹಾಗೂ ರಥೋತ್ಸವವನ್ನು ಡಿಸಿ ಪ್ರಶಾಂತ ಕುಮಾರ ಮಿಶ್ರಾ ನಿಷೇಧಿಸಿದ ಆದೇಶ ಹೊರಡಿಸಿದ್ದಾರೆ.

ಕೊಳಗಲ್ಲು ಗ್ರಾಮದಲ್ಲಿ ಎರ‌್ರಿತಾತನವರ ದೇವಸ್ಥಾನದ ಆಸ್ತಿ-ಪಾಸ್ತಿ ಮತ್ತು ಆಡಳಿತ ವಿಚಾರವಾಗಿ ಗಲಾಟೆಗಳಾಗಿ ವಿವಾದವಿದೆ.

ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮೂರ್ತಿ ತೆರವುಗೊಳಿಸಿರುವುದರಿಂದ ಕೊಳಗಲ್ ಗ್ರಾಮದಲ್ಲಿ ಪರ-ವಿರೋಧ ಇರುವ ವಿವಿಧ ಜಾತಿ ಜನಾಂಗದವರ ಮಧ್ಯೆ ವೈಷಮ್ಯ ಉಂಟಾಗಿ 2024 ರ ಏ.07 ರಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದು ಮತ್ತು ದೇವಸ್ಥಾನದ ಆಸ್ತಿ-ಪಾಸ್ತಿ ಹಾಗೂ ಆಡಳಿತದ ವಿಚಾರವಾಗಿ ಗಲಾಟೆಗಳಾಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ದರಿಂದ, ಆಚರಣೆ ಮಾಡಿದಲ್ಲಿ ಸಾರ್ವಜನಿಕರಿಗೆ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ರಥೋತ್ಸವವನ್ನು ಆಚರಣೆ ಮಾಡದಂತೆ ನಿಷೇಧಿಸಲಾಗಿದೆ.

ಅದರಂತೆ, ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮಾ.28 ರಂದು ನಡೆದ ಸಭೆಯ ನಡವಳಿಗಳಲ್ಲಿ ಜಾತ್ರೆ ಆಚರಿಸಲು ಅನುಮತಿ ನೀಡಿದಲ್ಲಿ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿದಿದೆ.

=====