ಬಳ್ಳಾರಿ ; ವೀರಶೈವ ಸಂಘದ ಕಾಲೇಜುಗಳ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ದಿಗೆ ನೆರವು ನೀಡಲಾಗುವುದು ಎಂದು ವೀ.ವಿ.ಸಂಘದ ಕಾಲೇಜು ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಸಾಹುಕಾರ ಸತೀಶ್‌ಬಾಬು ಹೇಳಿದರು.
ನಗರದ ವೀ.ವಿ.ಕಚೇರಿಯಲ್ಲಿ ವೀ.ವಿ.ಸಂಘದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಹ ಶೌಚಾಲಯ ಮೊದಲಾದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಎಲ್ಲದಕ್ಕೂ ಮಿಗಿಲಾಗಿ ಉತ್ತಮ ಭೋದನೆ ಉತ್ತಮ ರೀತಿಯಲ್ಲಿದ್ದರೆ ಮಾತ್ರ ಕಾಲೇೀಜಿನ ಹೆಸರು ಚಿರಸ್ಥಾಯಿಯಾಗಿ ಇರಲಿದೆ. ಸಂಸ್ಥೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ ಎಂದು ಹೇಳಿದರು.