ಜಿಲ್ಲೆ

ಆದರ್ಶ ಮೈಗೂಡಿಸಿಕೊಳ್ಳಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಶಿಸ್ತು, ಸಂಯಮ, ಸಂಸ್ಕೃತಿಗೆ ಮತ್ತೊಂದು ಹೆಸರು ಗೋಪಾಲ ಕೃಷ್ಣ ಗೋಖಲೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.

ತಾಲೂಕಿನ ಸಂಜೀವರಾಯನಕೋಟೆಯ ಅರಿವು ಕೇಂದ್ರ ಗ್ರಂಥಾಲಯ ಬೇಸಿಗೆ ಶಿಬಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗೋಪಾಲ ಕೃಷ್ಣ ಗೋಖಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೋಖಲೆ ಅವರು ಸ್ಥಾಪಿಸಿದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಉತ್ತಮ ಕೆಲಸ ಮಾಡುತ್ತಾ ದೇಶದಾದ್ಯಂತ ಮನೆಮಾತಾಗಿದೆ. ಗಾಂಧೀಜಿ ಅವರ ರಾಜಕೀಯ ಗುರುಗಳಾಗಿ, ಅಪ್ಪಟ ದೇಶಾಭಿಮಾನಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಆದ್ದರಿಂದ ವಿದ್ಯಾರ್ಥಿಗಳು ಗೋಖಲೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಿಷ್ಠಾವಂತರಾಗಿ ಬಾಳಬೇಕೆಂದು ಹೇಳಿದರು. ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಾದ ಜ್ಯೋತಿ, ವಾಣಿಶ್ರೀಗೆ ಬಹುಮಾನ ವಿತರಿಸಲಾಯಿತು.