ಬಳ್ಳಾರಿ: ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು ಕರೊನಾ ಮುಜುಗರದಿಂದ ಪಿಯು ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆಯಿಂದ ದೂರವುಳಿದರು. ಬಳ್ಳಾರಿಯ ಮೂವರು ಹಾಗೂ ಹೊಸಪೇಟೆಯ ಒಬ್ಬ ವಿದ್ಯಾರ್ಥಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ, ಎನ್-95 ಮಾಸ್ಕ್ ಹಾಗೂ ಕೈಗವಸುಗಳನ್ನು ನೀಡಲಾಗಿದೆ. ಆದರೆ, ಹೊಸಪೇಟೆಯ ಒಬ್ಬ ಹಾಗೂ ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳು ಕುಟುಂಬ ಸದಸ್ಯರಿಗೆ ಕರೊನಾ ಬಂದಿರುವುದು, ಇಲ್ಲವೇ ಕ್ವಾರಂಟೈನ್‌ನಲ್ಲಿರುವುದು ಸ್ನೇಹಿತರಿಗೆ ತಿಳಿಯಲಿದೆ ಮತ್ತು ಮಾಸ್ಕ್-ಕೈಗವಸು ಹಾಕಿಕೊಂಡು ಪರೀಕ್ಷೆ ಬರೆಯುವುದು ಕೂಡ ಕಷ್ಟ ಎಂಬ ಕಾರಣಕ್ಕೆ ಪರೀಕ್ಷೆ ಬರೆದಿಲ್ಲ. ಕ್ವಾರಂಟೈನ್‌ನಲ್ಲಿರುವ ಒಬ್ಬ ವಿದ್ಯಾರ್ಥಿ ಬಳ್ಳಾರಿಯ ಬೆಸ್ಟ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾನೆ.