ಉಜ್ಜಿನಿ ಸಮೀಪದ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳ ಬೆಳಗೆ ದಾಳಿ ಇಟ್ಟಿರುವ ಲದ್ದಿಹುಳು ನಿಯಂತ್ರಣಕ್ಕೆ ರೈತರು ಔಷಧ ಸಿಂಪಡಣೆ ಮಾಡುತ್ತಿರುವುದು.  
ಜಿಲ್ಲೆ

ಇ-ಕೆವೈಸಿಗೆ ಅನ್ನದಾತ ಹಿಂದೇಟು

ಶಶಿಧರ ಎಲ್

ಹೀರಾನಾಯ್ಕ ಟಿ. ಬಳ್ಳಾರಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಯೋಜನೆಯಡಿ ನೇರವಾಗಿ ಆರ್ಥಿಕ ನೆರವು ಪಡೆಯಲು ರೈತರಿಗೆ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದರೂ ರೈತರು ಹಿಂದೇಟು ಹಾಕುತ್ತಿದ್ದಾರೆ.

ಈಗಾಗಲೇ ಇ-ಕೆವೈಸಿ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರ ಅನೇಕ ಬಾರಿ ಅವಧಿ ವಿಸ್ತರಿಸಿದ್ದರೂ ರೈತರು ನಿರ್ಲಕ್ಷೃವಹಿಸುತ್ತಿದ್ದಾರೆ. ಯೋಜನೆಯ ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳಲು ಇ-ಕೆವೈಸಿ ಮಾಡಿಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಒಟ್ಟು 78,881ಅರ್ಹ ಫಲಾನುಭವಿಗಳು ಈ ಯೋಜನೆಯ ಅರ್ಹತೆಯನ್ನು ಪಡೆದುಕೊಂಡಿದ್ದು, ಅದರಲ್ಲಿ 52, 961 ರೈತರು ಇ-ಕೆವೈಸಿ ಮಾಡಿಸಿದ್ದಾರೆ. ಇನ್ನು 25,920 ರೈತರು ಇ-ಕೆವೈಸಿ ಮಾಡಿಸಿಲ್ಲ. ಅದಕ್ಕೆ ಪ್ರಮುಖ ಕಾರಣ ರೈತರಲ್ಲಿ ಅರಿವು ಇಲ್ಲದಿರುವುದು.

ತಲುಪದ ಗುರಿ: ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸಿದರಷ್ಟೇ ಅವರಿಗೆ ಯೋಜನೆಯ ಸೌಲಭ್ಯ ಪಡೆಯಲು ಅವಕಾಶ ಇದೆ. ಆದರೆ ಇ-ಕೆವೈಸಿ ಮಾಡಿ ಸಿಕೊಳ್ಳಲು ರೈತರು ನಿರ್ಲಕ್ಷೃ ವಹಿಸಿರುವ ಹಿನ್ನೆಲೆ ಜಿಲ್ಲೆಯಲ್ಲಿ ಕೃಷಿ ಇಲಾಖೆ ತಲುಪಬೇಕಾದ ಗುರಿ ಹೊಂದಿದ್ದು ಇನ್ನು ತಲುಪಿಲ್ಲ. ಶೇ.67 ರಷ್ಟು ಮಾತ್ರ ಗುರಿ ಸಾಧಿಸಲಾಗಿದ್ದು, ಶೇ.33 ರಷ್ಟು ರೈತರು ಇ-ಕೆವೈಸಿ ಮಾಡಿಸಬೇಕಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಬಳ್ಳಾರಿ ತಾಲೂಕಿನಲ್ಲಿ ಶೇ.69, ಕಂಪ್ಲಿ ಶೇ.63, ಕುರುಗೋಡು ಶೇ.68, ಸಂಡೂರು ಶೇ.67, ಸಿರಗುಪ್ಪ ಶೇ.63 ಗುರಿ ಸಾಧಿಸಲಾಗಿದೆ. ಕೆಲ ರೈತರ ಆಧಾರ್ ಲಿಂಕ್ ಸರಿಯಾಗಿ ಜೋಡಣೆ ಆಗದಿರುವುದು, ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರುವುದು, ಕೆಲವರು ನಿಧನ ಹೊಂದಿದ್ದರೂ ಆ ಬಗ್ಗೆ ಮಾಹಿತಿ ನೀಡದಿರುವುದು ಕೂಡ ಗುರಿ ತಲುಪಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ರೈತರು ಏನು ಮಾಡಬೇಕು ?: ರೈತರು http://pmkisan.gov.in/ ಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಲಾನುಭವಿಯಾಗಿರುವ ಪ್ರತಿಯೊಬ್ಬ ರೈತನ ಆಧಾರ್ ಸಂಖ್ಯೆಯನ್ನು, ನಂತರ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್‌ಗೆ ಒಟಿಪಿ ರವಾನೆಯಾಗುತ್ತದೆ. ಹೀಗೆ ಸ್ವೀಕರಿಸಿದ ಒಟಿಪಿಯನ್ನು ಪೋರ್ಟಲ್ ನಲ್ಲಿ ದಾಖಲಿಸಿ ಖಖಿಆಐ ಊಣ್ಕ ಅಖಿಏ ಎಂಬ ಬಟನ್ ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಒಟಿಪಿ ಆಧಾರಿತವಾಗಿ ಲಾನುಭವಿಯು ಖುದ್ದಾಗಿ ಕೆವೈಸಿ ಮಾಡಬಹುದಾಗಿದೆ. ಯಾವ ಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ ಕೆವೈಸಿಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುವುದಿಲ್ಲವೋ ಅವರು ನಾಗರಿಕ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಗೆ ತೆರಳಿ, ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಬಹುದಾಗಿದೆ. ಅಲ್ಲಿ ಕೈಬೆರಳಿನ ಗುರುತು ಆಧಾರದ ಮೇಲೆ ಕೆವೈಸಿ ಮಾಡಲಾಗುತ್ತದೆ.

ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ 13ನೇ ಕಂತಿನ ಹಣ ರೈತರ ಖಾತೆಗೆ ವರ್ಗಾವಣೆ ಆಗುವುದಿಲ್ಲ. ಅದಕ್ಕಾಗಿ ಸಮೀಪದ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ, ಇಲ್ಲವೆ ಸೈಬರ್ ಕೇಂದ್ರಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.| ಡಾ.ಮಲ್ಲಿಕಾರ್ಜುನ, ಜಂಟಿ ನಿರ್ದೇಶಕ ಕೃಷಿ ಇಲಾಖೆ