ಜಿಲ್ಲೆ

ಮಕ್ಕಳ ರಕ್ಷಣೆಗೆ ಕಾನೂನುಗಳ ಪುಸ್ತಕ ವಿತರಣೆ

ಬಳ್ಳಾರಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮಾರ್ಗದರ್ಶನದಲ್ಲಿ ರೀಡ್ಸ್ ಸಂಸ್ಥೆ ವತಿಯಿಂದ ಹೊರತಲಾದ ಮಕ್ಕಳ ರಕ್ಷಣೆಗೆ ಕಾನೂನು ಪುಸ್ತಕಗಳನ್ನು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವಿತರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ಪಶ್ಚಿಮ ವಿಭಾಗ-141, ಬಳ್ಳಾರಿ ಪೂರ್ವ ವಿಭಾಗ-177, ಕಂಪ್ಲಿ-52, ಸಂಡೂರು-249 ಮತ್ತು ಸಿರಗುಪ್ಪದ 100 ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ.